ಐವರ್ನಾಡು:ಗೆಳೆಯರ ಬಳಗ ಐವರ್ನಾಡು ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಹಾಗೂ ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟ ಫೆ. 22 ಮತ್ತು 23 ರಂದು ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಐವರ್ನಾಡು ಗೆಳೆಯರ ಬಳಗದ ಗೌರವಾಧ್ಯಕ್ಷರಾದ ಎಸ್.ಎನ್. ಮನ್ಮಥ ತಿಳಿಸಿದ್ದಾರೆ. ಐವರ್ನಾಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಪಂದ್ಯಾಟದ
ವಿವರ ನೀಡಿದರು.12 ವರ್ಷಗಳ ಹಿಂದೆ ಐವರ್ನಾಡಿನಲ್ಲಿ ನಡೆದ ಕಬಡ್ಡಿ ಪಂದ್ಯಾಟದ ನೆನಪು ಜನರಲ್ಲಿ ಇಂದಿಗೂ ಇದೆ. ಆ ಪಂದ್ಯಾಟದ ಪ್ರೇರಣೆಯಲ್ಲಿ ಗ್ರಾಮದಿಂದ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟುಗಳು ರೂಪುಗೊಂಡಿದ್ದರು.ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಮತ್ತು ಜನರ ಮನಸ್ಸಿನಲ್ಲಿ ಸದಾ ಉಳಿಯುಂತಹಾ ಕಬಡ್ಡಿ ಪಂದ್ಯಾಟ ನಡೆಸಬೇಕು ಎಂಬ ನೆಲೆಯಲ್ಲಿ ಎಲ್ಲಾ ಸಿದ್ಧತೆಗಳು ನಡೆಸಲಾಗಿದೆ ಎಂದರು.
ಫೆಬ್ರವರಿ 22 ಶನಿವಾರ ಮಧ್ಯಾಹ್ನದ ಬಳಿಕ 3 ಗಂಟೆಯಿಂದ ಪಂದ್ಯಾಟಗಳು ಆರಂಭವಾಗಲಿದೆ ಸಂಜೆ 5:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಚೇರ್ಮೆನ್ ರಾಕೇಶ್ ಮಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅತಿಥಿಗಳಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಜಾಕೆ ಮಾಧವ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಅರಂತೋಡು ಪಾಪ್ಯುಲರ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಪಿ.ಬಿ.ದಿವಾಕರ ರೈ, ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ.ಮಾಧವ, ಐವರ್ನಾಡು ಪ್ರೌಢ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ದಯಾನಂದ ಕಟ್ಟತ್ತಾರು, ಗ್ರಾ.ಪಂ. ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ , ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಇಸಾಕ್ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಜೋತ್ಸ್ನಾ ಪಾಲೆಪ್ಪಾಡಿ, ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಕುತ್ಯಾಡಿ, ಪ್ರಸಾದ್ ಕೆ.ಬಿ. ಪದ್ಮನಾಭ ಬೀಡು ಬೆಳ್ಳಾರೆ, ಲಕ್ಷ್ಮೀನಾರಾಯಣ ಕಣಪಿಲ, ಸೂಫಿ ಪೆರಾಜೆ, ದಾಮೋದರ ಗೌಡ ಜಬಳೆ, ಮಾಧವ ಭಟ್ ಶೃಂಗೇರಿ ಜಿ.ಟಿ. ವೆಂಕಪ್ಪ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
12 ತಂಡಗಳು ಭಾಗಿ:
ರಾಜ್ಯ ಹಾಗೂ ಅಂತಾರಾಜ್ಯದ 12 ತಂಡಗಳು ಭಾಗವಹಿಸಲಿದೆ. 12 ತಂಡಗಳನ್ನು ನಾಲ್ಕು ಫೂಲ್ಗಳಾಗಿ ವಿಂಗಡಿಸಿ ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಸೇರಿ ಒಟ್ಟು 21 ಪಂದ್ಯಗಳು ನಡೆಯಲಿದೆ. ಬ್ಯಾಂಕ್ ಆಫ್ ಬರೋಡ, ಅಮೃತಹಳ್ಳಿ ಬೆಂಗಳೂರು ತಂಡ, ಎಎಂಕೆಸಿ, ತಮಿಳುನಾಡು ದೊರೈಸಿಂಗಂ ತಮಿಳುನಾಡು, ಮೈಸೂರು ವಿಶ್ವವಿದ್ಯಾನಿಲಯ ತಂಡ ಕೆಎಫ್ಡಿಸಿ ಸುಳ್ಯ ಪ್ರಾಯೋಜಿತ ತಮಿಳ್ನಾಡು ತಂಡ, ಎಸ್ಡಿಎಂ ಉಜಿರೆ, ಆಳ್ವಾಸ್ ಮೂಡಬಿದ್ರೆ, ವಿದ್ಯಾಂಜನೇಯ ಉಳ್ಳಾಲ, ಫ್ರೆಂಡ್ಸ್ ಕಡಬ, ಎನ್ಎಂಸಿ ಸುಳ್ಯ ತಂಡಗಳು ಭಾಗವಹಿಸಲಿದೆ. ಮ್ಯಾಟ್ ಅಂಕಣದಲ್ಲಿ

ಪಂದ್ಯಾಟ ನಡೆಯಲಿದೆ. 3500 ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ನಿರ್ಮಾಣವಾಗುತ್ತಿದೆ. ಪ್ರೇಕ್ಷಕರು ಉಚಿತವಾಗಿ ಪಂದ್ಯಾಟವನ್ನು ವೀಕ್ಷಿಸಬಹುದು ಎಂದು ಅವರು ವಿವರಿಸಿದರು.
ಬಹುಮಾನಗಳು:
ವಿಜೇತರಿಗೆ ಪ್ರಥಮ ಬಹುಮಾನವಾಗಿ 70 ಸಾವಿರ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 50,000 ಮತ್ತು ಟ್ರೋಫಿ, ತೃತೀಯ ಮತ್ತು ಚತುರ್ಥ ಬಹುಮಾನ ತಲಾ 25,000 ಮತ್ತು ಟ್ರೋಫಿ ನೀಡಲಾಗುವುದು. ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಸರ್ವಾಂಗೀಣ ಆಟಗಾರ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಎಸ್.ಎನ್.ಮನ್ಮಥ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಸಾತ್ವಿಕ್ ಕುದುಂಗು ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ ಸಂಚಾಲಕರಾದ ವಾಸುದೇವ ಬೊಳುಬೈಲು, ಸ್ವಾಗತ ಸಮಿತಿ ಸಂಚಾಲಕರಾದ ದಿನೇಶ್ ಮಾಡ್ತಿಲ, ಪ್ರಮುಖರಾದ ದೊಡ್ಡಣ್ಣ ಬರೆಮೇಲು ಸೂಫಿ ಪೆರಾಜೆ, ಶೇಖರ ಮಡ್ತಲ, ಬಾಲಕೃಷ್ಣ ಕೀಲಾಡಿ, ಅನಂತಕುಮಾರ್ ಕಂಡಿಗೆಮೂಲೆ, ಶಾಂತರಾಮ ಕಣಿಲೆಗುಂಡಿ, ಗೋಪಾಲಕೃಷ್ಣ ಚೆಮ್ನೂರು, ಪ್ರಭಾಕರ, ಬಾಲಕೃಷ್ಣ ಮಡ್ತಿಲ, ಜಿ.ಟಿ. ವೆಂಕಪ್ಪ, ರಂಜನ್ ಮೂಲೆತೋಟ, ವೀರನಾಥ, ಮಹೇಶ್ ಜಬಳೇ, ದೀಪಕ್, ನಟರಾಜ್ ಮತ್ತಿತರರು