ಮುಂಬೈ: ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಅಂತಿಮ ಟಿ–20 ಪಂದ್ಯದಲ್ಲಿ 150 ರನ್ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ 4–1ರ ಅಂತರದಿಂದ ಸರಣಿ ಜಯಿಸಿದೆ. ಭಾರತ ನೀಡಿದ್ದ 248 ರನ್ ಗುರಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್ 10.3 ಓವರ್ಗಳಲ್ಲಿ 97 ರನ್ಗಳಿಗೆ ಆಲೌಟ್ ಆಗುವ ಮೂಲಕ
ಹೀನಾಯ ಸೋಲು ಕಂಡಿದೆ.ಬೃಹತ್ ಮೊತ್ತ ಬೆನ್ನತ್ತಿದ್ದ ಇಂಗ್ಲೆಂಡ್ ತಂಡವನ್ನು ಕಾಡಿದ ಮೊಹಮ್ಮದ್ ಶಮಿ(25/3), ವರುಣ್ ಚಕ್ರವರ್ತಿ(25/2), ಶಿವಂ ದುಬೆ(11/2) ಮತ್ತು ಅಭಿಷೇಕ್ ಶರ್ಮಾ(3/2) 100ರ ಗಡಿ ದಾಟಲೂ ಬಿಡಲಿಲ್ಲ. ಭರ್ಜರಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಅಭಿಷೇಕ್ ಮತ್ತು ದುಬೆ ಅಬ್ಬರಿಸಿದರು.ಇದಕ್ಕೂ ಮುನ್ನ, ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದಿದ್ದ ಭಾರತ ತಂಡ ಅಭಿಷೇಕ್ ಶರ್ಮಾ ಅವರ ಅಮೋಘ ಶತಕದ(135) 9 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿತ್ತು. ಅಭಿಷೇಕ್ ಅವರ ಅಮೋಘ ಶತಕದಲ್ಲಿ 7 ಬೌಂಡರಿ ಮತ್ತು 13 ಸಿಕ್ಸರ್ಗಳಿದ್ದವು.
ಉಳಿದಂತೆ, ತಿಲಕ್ ವರ್ಮಾ 24, ಶಿವಂ ದುಬೆ 30 ರನ್ಗಳ ಉಪಯುಕ್ತ ಕಾಣಿಕೆ ನೀಡಿದ್ದರು.ಅಭಿಷೇಕ್ ಶರ್ಮ ಪಂದ್ಯ ಶ್ರೇಷ್ಠ ಹಾಗೂ ವರುಣ್ ಚಕ್ರವರ್ತಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.