ಐವರ್ನಾಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬೆಳ್ಳಾರೆ ವಲಯ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಐವರ್ನಾಡು ಇದರ ಸಹಯೋಗದಿಂದ 17ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು
ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ. ಕ್ಷೆ.ಧ.ಗ್ರಾ. ಯೋಜನೆ ದ.ಕ. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಐವರ್ನಾಡು ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ ಕುತ್ಯಾಡಿ, ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ, ಮಾಜಿ ಅಧ್ಯಕ್ಷ ಶ್ರೀನಿವಾಸ್ ಮಾಡ್ತಿಲ, ವೇದ ಹೆಚ್ ಶೆಟ್ಟಿ. ಕೊರಗಪ್ಪ ಗೌಡ ಪೂಜಾರಿ ಮನೆ, ದಿನೇಶ್ ಮಡ್ತಿಲ. ಶ್ರೀ. ಕ್ಷೆ. ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ತಾಲೂಕು. ವಲಯದ ಎಲ್ಲಾ ಒಕ್ಕೂಟ ಅಧ್ಯಕ್ಷರುಗಳು, ಪದಾಧಿಕಾರಿಗಳು, ನಿಕಟ ಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಸೇವಾದಾರರು, ಶೌರ್ಯ ವಿಪತ್ತು ಘಟಕ ಬೆಳ್ಳಾರೆ ವಲಯ, ಸಂಘದ ಎಲ್ಲಾ ಸದಸ್ಯರು. ಭಾಗವಹಿಸಿದರು. ಬೆಳ್ಳಾರೆ ವಲಯದ ಮೇಲ್ವಿಚಾರಕಿ ವಿಶಾಲ ಕಾರ್ಯಕ್ರಮ ನಿರೂಪಿಸಿದರು.

ವೇದ ಹೆಚ್ ಶೆಟ್ಟಿ ಸ್ವಾಗತಿಸಿದರು ದಾಮೋದರ್ ಕೊಡ್ತಿಲು ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ 10 ಮಂದಿ ಸಂಘದ ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು ಯೋಜನೆಯಿಂದ ದೊರಕುವ ಜನಮಂಗಳ ಕಾರ್ಯಕ್ರಮದಲ್ಲಿ ನೀಡುವ ವಾಟರ್ ಬೆಡ್, ಯು ಶೇಪ್ ವಾಕರ್, ವೀಲ್ ಚಯರ್, ಕ್ಷೇತ್ರದಿಂದ ಸಹಾಯಧನ ಮಂಜೂರಾದ ಕ್ರಿಟಿಕಲ್ ಫಂಡ್, ಪಿ ಆರ್ ಕೆ ಸೌಲಭ್ಯ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಗ್ರಾಮದ ಸಾಧಕರಾದ ಪ್ರವೀಣ್ ಪವಿತ್ರ ಮಜಲು ಮತ್ತು ಎಸ್ ಎನ್ ಮನ್ಮಥ ಇವರನ್ನು ಗೌರವಿಸಲಾಯಿತು.
