ಕೊಲಂಬೊ:ಶ್ರೀಲಂಕಾ ವಿರುದ್ಧ ಶುಭಮನ್ ಗಿಲ್ ನೇತೃತ್ವದ ಭಾರತ ತಂಡವು ಶನಿವಾರದಿಂದ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಡಲಿದೆ.ಗಾಲ್ ಕ್ರೀಡಾಂಗಣದಲ್ಲಿ ಆರಂಭವಾಗುವ ಟೆಸ್ಟ್ ಭಾರತದ 600ನೇ ಟೆಸ್ಟ್ ಪಂದ್ಯವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು
ಈ ಟೆಸ್ಟ್ ಸರಣಿ ಗೆಲುವು ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಭಾರತದ 600ನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ‘ದೊಡ್ಡ ಗೌರವ’ ಎಂದು ನಾಯಕ ಶುಭಮನ್ ಗಿಲ್ ಹೇಳಿದ್ದಾರೆ.ಇಂಗ್ಲೆಂಡ್ (1,097) ಮತ್ತು ಆಸ್ಟ್ರೇಲಿಯಾ (884) ತಂಡಗಳು ಮಾತ್ರ ಭಾರತಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿವೆ. ಭಾರತದ
ಸ್ವಾತಂತ್ರ್ಯ ದಿನದಂದೇ ಈ ಟೆಸ್ಟ್ ಪಂದ್ಯ ಆರಂಭವಾಗುತ್ತಿದೆ. ಭಾರತ 1932ರಲ್ಲಿ ಇಂಗ್ಲೆಂಡ್ನ ಲಾರ್ಡ್ಸ್ನಲ್ಲಿ ತನ್ನ ಮೊದಲ ಟೆಸ್ಟ್ ಆಡಿತ್ತು. ಇಲ್ಲಿಯವರೆಗೆ 186 ಪಂದ್ಯಗಳನ್ನು ಜಯಿಸಿದ್ದು,188ರಲ್ಲಿ ಸೋತಿದೆ. 224 ಪಂದ್ಯಗಳು ಡ್ರಾ ಆಗಿವೆ. ಒಂದು ‘ಟೈ’ ಪಂದ್ಯ ಸೇರಿದೆ. ಕೋಚ್ ಗಂಭೀರ್ ಅವರಿಗೂ ಈ ಸರಣಿ ಮಹತ್ವದ್ದು. ಅವರ ಕೋಚ್ ಆದ ನಂತರ ಆಡಿರುವ 20 ಟೆಸ್ಟ್ಗಳಲ್ಲಿ ಭಾರತ ಎಂಟು ಗೆದ್ದು, ಹತ್ತನ್ನು ಸೋತಿದೆ. ಭಾರತ ಈಗ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಐದನೇ ಸ್ಥಾನದಲ್ಲಿದೆ. ಶ್ರೀಲಂಕಾಕ್ಕಿಂತ ಒಂದು ಸ್ಥಾನ ಮೊದಲು.







































