ಫ್ಲಾರಿಡಾ: ಟಿ20 ವಿಶ್ವಕಪ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಕೆನಡಾ ತಂಡವನ್ನು ಎದುರಿಸಲಿದೆ. ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.ಭಾರತ ತಂಡವು ಈಗಾಗಲೇ ಸೂಪರ್ 8ರ ಹಂತ ತಲುಪಿದೆ. ಕಳೆದ ಮೂರು ಪಂದ್ಯಗಳಲ್ಲಿ ಜಯಸಿದೆ, ಗುಂಪು ಹಂತದಲ್ಲಿ ರೋಹಿತ್ ಶರ್ಮಾ ಬಳಗಕ್ಕೆ ಇದು ಕೊನೆಯ ಪಂದ್ಯವಾಗಿದೆ. ಕೆನಡಾ ತಂಡಕ್ಕೂ ಇದು ಕೊನೆಯ ಹಣಾಹಣಿ. ಕಳೆದ ಮೂರು ಪಂದ್ಯಗಳಲ್ಲಿ
ಎರಡು ಸೋತಿರುವ ತಂಡವು ಐರ್ಲೆಂಡ್ ಎದುರು ಜಯಿಸಿತ್ತು.
ರೋಹಿತ್ ಬಳಗಕ್ಕೆ ಎಂಟರ ಘಟ್ಟದ ಪೂರ್ವಸಿದ್ಧತೆಗೆ ಈ ಪಂದ್ಯ ವೇದಿಕೆಯಾಗಲಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಬೆಂಚ್ನಲ್ಲಿರುವವರಿಗೆ ಅವಕಾಶ ನೀಡುವತ್ತ ತಂಡದ ಮ್ಯಾನೇಜ್ಮೆಂಟ್ ಚಿತ್ತ ಹರಿಸುವ ಸಾಧ್ಯತೆ ಇದೆ. ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ. ಕೆನಡಾ ತಂಡವು ಕಳೆದ ಪಂದ್ಯಗಳಲ್ಲಿ ಆಡಿದ ಸಂಯೋಜನೆಯನ್ನೇ ಉಳಿಸಿಕೊಂಡು ಕಣಕ್ಕಿಳಿಯಬಹುದು. ಈ ತಂಡದಲ್ಲಿ ಒಟ್ಟು ಐವರು ಭಾರತೀಯ ಮೂಲದವರಿದ್ದಾರೆ. ಭಾರತ ಮತ್ತು ಕೆನಡಾ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ) ವಿರಾಟ್ ಕೊಹ್ಲಿ ರಿಷಭ್ ಪಂತ್ (ವಿಕೆಟ್ಕೀಪರ್) ಸೂರ್ಯಕುಮಾರ್ ಯಾದವ್ ಹಾರ್ದಿಕ್ ಪಾಂಡ್ಯ ಶಿವಂ ದುಬೆ ರವೀಂದ್ರ ಜಡೇಜ ಅಕ್ಷರ್ ಪಟೇಲ್ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ಅರ್ಷದೀಪ್ ಸಿಂಗ್
ಕೆನಡಾ ತಂಡ: ಸಾದ್ ಬಿನ್ ಜಾಫರ್ (ನಾಯಕ) ಆ್ಯರನ್ ಜಾನ್ಸನ್ ನವನೀತ್ ಧಲಿವಾಲ್ ಪರ್ಗತ್ ಸಿಂಗ್ ನಿಕೋಲಸ್ ಕಿರ್ಟನ್ ಶ್ರೇಯಸ್ ಮೊವಾ (ವಿಕೆಟ್ಕೀಪರ್) ರವಿಂದರ್ಪಾಲ್ ಸಿಂಗ್ ಖಲೀಂ ಸನಾ ದಿಲ್ಲೋನ್ ಹೆಲಿಗರ್ ಜುನೈದ್ ಸಿದ್ಧಿಕ್ ಜೆರೆಮಿ ಗೊರ್ಡಾನ್. ಪಂದ್ಯ ಆರಂಭ: ರಾತ್ರಿ 8 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಡಿಡಿ ಸ್ಪೋರ್ಟ್ಸ್ ಹಾಟ್ಸ್ಟಾರ್ ಆ್ಯಪ್.