ಮುಕ್ಕೂರು:ಮುಕ್ಕೂರು ನೇಸರ ಯುವಕ ಮಂಡಲ, ನೇಸರ ದಶಪ್ರಣತಿ ಸಮಿತಿ–2026 ಹಾಗೂ ನೇಸರ ಯುವತಿ ಮಂಡಲ ವತಿಯಿಂದ ನಡೆದ ರಾಜ್ಯ ಮಟ್ಟದ ಕವನ ಸ್ಪರ್ಧೆಯ ವಿಜೇತರು ಪ್ರಶಸ್ತಿ ಸ್ವೀಕರಿಸಿದರು.
ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತರಿಗೆ
ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಅಂಕಿತಾ ಕೆ.ಎಸ್. (ಪರ್ಕಳ ಪ್ರೌಢ ಶಾಲೆ, ಉಡುಪಿ) ಪ್ರಥಮ ಹಾಗೂ ಅವನಿ ಕೆ. (ಶ್ರೀ ಭಾರತೀ ವಿದ್ಯಾಪೀಠ, ಬದಿಯಡ್ಕ, ಕಾಸರಗೋಡು) ದ್ವಿತೀಯ ಸ್ಥಾನ ಪಡೆದರೆ, ಶ್ರೇಯಾಸ್ ಎಸ್.ಎಂ. (ಮಂಡೆಕೋಲು, ಸುಳ್ಯ) ಮತ್ತು ಅವನಿ ಎಂ. (ಬೆಳ್ಳೂರು, ಕಾಸರಗೋಡು).
ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಸುಶ್ಮಿತಾ ಬಿ.ಆರ್. (ಚಾಣಕ್ಯ ವಿಶ್ವವಿದ್ಯಾಲಯ, ಬೆಂಗಳೂರು ಗ್ರಾಮಾಂತರ) ಪ್ರಥಮ ಹಾಗೂ ಅಕ್ಷಯ್ (ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು; ಕೊಕ್ಕಡ, ಬೆಳ್ತಂಗಡಿ) ದ್ವಿತೀಯ ಸ್ಥಾನ ಪಡೆದರು. ಧನ್ಯ ಎ. (ದೇವಚಳ್ಳ, ಸುಳ್ಯ) ಹಾಗೂ ಪ್ರಸಾದ್ ಎಸ್. (ಮೂಲ್ಕಿ, ದಕ್ಷಿಣ ಕನ್ನಡ),
ಸಾರ್ವಜನಿಕ ವಿಭಾಗದಲ್ಲಿ ರೇಖಾ ಕೆ.ಎಂ. (ಮಂಜೇಶ್ವರ, ಕಾಸರಗೋಡು) ಪ್ರಥಮ ಹಾಗೂ ಸತ್ಯಲತಾ ಸಿದ್ಧಮೂಲೆ (ಬೆಳ್ತಂಗಡಿ) ದ್ವಿತೀಯ ಸ್ಥಾನ ಪಡೆದರೆ, ಎ.ಪಿ. ಉಮಾಶಂಕರಿ ಮರಿಕೆ (ಪುತ್ತೂರು), ಪಂಕಜಾ ಕೆ. (ಮುಡಿಪು) ಹಾಗೂ ದಿವಾಕರ ಬಲ್ಲಾಳ್ (ಮಂಗಳೂರು) ವಿಜೇತರಾದರು.
ಡಾ. ಧನಂಜಯ ಕುಂಬ್ಳೆ, ಗೋಪಾಲಕೃಷ್ಣ ಭಟ್ ಮನವಳಿಕೆ ಹಾಗೂ ಅಶ್ವಿನಿ ಕೋಡಿಬೈಲು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.











