ಮುಂಬೈ: ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಕ್ರಿಕೆಟ್ ತಂಡ, ತಲಾ ಮೂರು ಪಂದ್ಯಗಳ ಟ್ವೆಂಟಿ-20 ಹಾಗೂ ಏಕದಿನ ಸರಣಿಗಳಲ್ಲಿ ಭಾಗವಹಿಸಲಿದೆ. ಈ ಸಂಬಂಧ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಟಿ20 ಸರಣಿಯ ಎಲ್ಲ ಪಂದ್ಯಗಳು ಪಲ್ಲೆಕೆಲೆ ಮೈದಾನದಲ್ಲಿ ಮತ್ತು
ಏಕದಿನ ಸರಣಿಯು ಕೊಲಂಬೊದಲ್ಲಿ ಆಯೋಜನೆಯಾಗಲಿದೆ.
ಟಿ20 ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಸರಿಯಾಗಿ ಆರಂಭವಾಗಲಿದೆ. ಹಾಗೆಯೇ ಏಕದಿನ ಸರಣಿಯ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ.
ಟಿ20 ಸರಣಿ ವೇಳಾಪಟ್ಟಿ:
ಜುಲೈ 26: ಮೊದಲ ಟಿ20
ಜುಲೈ 27: 2ನೇ ಟಿ20
ಜುಲೈ 29: 3ನೇ ಟಿ20
ಏಕದಿನ ಸರಣಿ ವೇಳಾಪಟ್ಟಿ:
ಆಗಸ್ಟ್ 1: ಮೊದಲ ಏಕದಿನ
ಆಗಸ್ಟ್ 4: 2ನೇ ಏಕದಿನ
ಆಗಸ್ಟ್ 7: 3ನೇ ಏಕದಿನ
ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡವನ್ನು ಇನ್ನಷ್ಟೇ ಘೋಷಿಸಬೇಕಿದೆ. ಹಾರ್ದಿಕ್ ಪಾಂಡ್ಯ ಅಥವಾ ಕೆ.ಎಲ್. ರಾಹುಲ್ ಮುನ್ನಡೆಸುವ ಸಾಧ್ಯತೆಯಿದೆ. ಏಕದಿನ ಸರಣಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಸೂಚಿಸುವ ಸಾಧ್ಯತೆಯಿದೆ.