ನವದೆಹಲಿ: ಟಿ–20 ವಿಶ್ವಕಪ್ ಗೆದ್ದಿರುವ ಭಾರತ ಕ್ರಿಕೆಟ್ ತಂಡ ಇಂದು ಬೆಳಗ್ಗೆ ದೆಹಲಿಗೆ ಆಗಮಿಸಿದೆ. ಬಾರಿ ಚಂಡಮಾರುತದ ನಡುವೆ ಬಾರ್ಬಡೋಸ್ ವಿಮಾನ ನಿಲ್ದಾಣ ಬಂದ್ ಆಗಿದ್ದರಿಂದ ಟ್ರೋಫಿ ಗೆದ್ದ ಬಳಿಕವೂ ಐದು ದಿನಗಳಿಂದ ತಂಡ ಅಲ್ಲಿಯೇ ಉಳಿದಿತ್ತು.ಇಂದು ವಿಶೇಷ ಚಾರ್ಟರ್ ವಿಮಾನದಲ್ಲಿ ತಂಡ ಆಗಮಿಸಿದಾಗ ದೆಹಲಿಯ
ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇರಿದ್ದ ಅಭಿಮಾನಿಗಳು ಶುಭಾಶಯ ಫಲಕಗಳನ್ನು ಹಿಡಿದು ತಮ್ಮ ನೆಚ್ಚಿನ ಆಟಗಾರರನ್ನು ಬರಮಾಡಿಕೊಂಡರು.
ಕಳೆದ ಶನಿವಾರ ನಡೆದ ಟಿ–20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳಿಂದ ಮಣಿಸಿದ್ದ ಭಾರತ ತಂಡ ಟ್ರೋಫಿ ಎತ್ತಿಹಿಡಿದಿತ್ತು.
ಆಟಗಾರರನ್ನು ಹೊತ್ತ ಏರ್ ಇಂಡಿಯಾದ ವಿಶೇಷ ಚಾರ್ಟರ್ ವಿಮಾನ ಎಐಸಿ24ಡಬ್ಲ್ಯುಸಿ ಬುಧವಾರ ಬಾರ್ಬಡೋಸ್ನ ಬ್ರಿಜ್ಟೌನ್ನಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 4.50ಕ್ಕೆ ಹೊರಟು 16 ಗಂಟೆಗಳ ತಡೆರಹಿತ ಪ್ರಯಾಣದ ಮೂಲಕ ಗುರುವಾರ ಬೆಳಿಗ್ಗೆ 6 ಗಂಟೆಗೆ ದೆಹಲಿಯಲ್ಲಿ ಲ್ಯಾಂಡ್ ಆಗಿದೆ.ಭಾರತ ತಂಡ, ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬ ಸದಸ್ಯರು, ಬಿಸಿಸಿಐನ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ವಿಮಾನದಲ್ಲಿ ಆಗಮಿಸಿದರು.
ಟಿ–20 ವಿಶ್ವಕಪ್ ವಿಜೇತ ತಂಡವು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದ್ದಾರೆ.ಇದಾದ, ಬಳಿಕ ತೆರೆದ ಬಸ್ನಲ್ಲಿ ಜಯದ ವಿಜಯೋತ್ಸವ ನಡೆಸಲು ತಂಡವು ಮುಂಬೈಗೆ ತೆರಳಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.