ಡರ್ಬನ್: ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಗಳಿಸಿದ ಸ್ಪೋಟಕ ಶತಕದ (107) ನೆರವಿನಿಂದ ಟೀಮ್ ಇಂಡಿಯಾ ಇಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟ್ವೆಂಟಿ- 20 ಪಂದ್ಯದಲ್ಲಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 202 ರನ್ಗಳ ಬೃಹತ್ ಮೊತ್ತ ಪೇರಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ
ಆರಂಭದಲ್ಲೇ ಅಭಿಷೇಕ್ ಶರ್ಮಾ (7) ವಿಕೆಟ್ ನಷ್ಟವಾಯಿತು.ಆದರೆ ನಾಯಕ ಸೂರ್ಯ ಕುಮಾರ್ ಯಾದವ್ ಜೊತೆಗೂಡಿದ ಸಂಜು ತಂಡವನ್ನು ಮುನ್ನಡೆಸಿದರು.ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಲೀಲಾಜಾಲವಾಗಿ ಅಟ್ಟಿದ ಸಂಜು ಸಿಕ್ಸರ್ ಬೌಂಡರಿಗಳ ಮಳೆ ಸುರಿಸಿ ಅಮೋಘ ಶತಕದ ಸಾಧನೆ ಮಾಡಿದರು. ಕೇವಲ 47 ಎಸೆತಗಳಲ್ಲಿ ಸಂಜು ಸತತ ಎರಡನೇ ಶತಕ ಬಾರಿಸಿದರು. ಆ ಮೂಲಕ ಟಿ 20 ಕ್ರಿಕೆಟ್ ನಲ್ಲಿ ಸತತ ಎರಡು ಶತಕ ಗಳಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿದರು.
ಅಂತಿಮವಾಗಿ ಸಂಜು 50 ಎಸೆತಗಳಲ್ಲಿ 107 ರನ್ ಗಳಿಸಿ ಔಟ್ ಆದರು. ಸಂಜು ಮನಮೋಹಕ ಇನಿಂಗ್ಸ್ ನಲ್ಲಿ 10 ಸಿಕ್ಸರ್ ಗಳು 7 ಬೌಂಡರಿಗಳು ಸೇರಿದ್ದವು.ಇನ್ನುಳಿದಂತೆ ತಿಲಕ್ ವರ್ಮಾ 33, ಸೂರ್ಯ ಕುಮಾರ್ 21 ರನ್ ಗಳಿಸಿ ಅಬ್ಬರಿಸಿದರು.