ಕೊಲಂಬೊ: ಏಷ್ಯಾಕಪ್ನ ಸೂಪರ್-4 ಹಂತದ 3ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ಟೀಮ್ ಇಂಡಿಯಾ 228 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 357 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ಕುಸಿದು 32 ಓವರ್ಗಳಲ್ಲಿ 128 ರನ್ಗೆ ಆಲ್ ಓಟ್ ಆಗಿ 228 ರನ್ಗಳಿಗೆ ಸೋಲನುಭವಿಸಿತು. ಪಾಕ್ ಪರ
ಫಕರ್ ಜಮಾನ್ 27, ಆಘಾ ಸಲ್ಮಾನ್ 23, ಇಫ್ತಿಕರ್ ಅಹಮ್ಮದ್ 23 ರನ್ ಗಳಿಸಿದರು. ಭಾರತದ ಪರ ಸ್ಪಿನ್ನರ್ ಕುಲ್ದೀಪ್ ಯಾದವ್ 25 ರನ್ ನೀಡಿ 5 ವಿಕೆಟ್ ಕಬಳಿಸಿದರು.ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು. ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಬರ್ಜರಿ ಶತಕದ ನೆರವಿನಿಂದ ಭಾರತ 50 ಓವರ್ಗಳಲ್ಲಿ ಭಾರತ ಎರಡು ವಿಕೆಟ್ ನಷ್ಟಕ್ಕೆ 356 ರನ್ ದಾಖಲಿಸಿತು.
ಭಾನುವಾರ ಸಂಜೆ ಮಳೆ ಸುರಿಯುವುದಕ್ಕೆ ಮುನ್ನ ಭಾರತದ ಆರಂಭಿಕ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಜೊತೆಯಾಟದ ಬಳಿಕ ಮಳೆಯ ಕಾರಣ ಪಂದ್ಯವನ್ನು ಸೋಮವಾರಕ್ಕೆ ನಿಗದಿಪಡಿಸಲಾಗಿತ್ತು.
ಮುಂದುವರಿದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಆಕರ್ಷಕ ಇನ್ನೀಂಗ್ಸ್ ಕಟ್ಟಿದರು. ಕೊಹ್ಲಿ ಒಂದು ದಿನ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 47ನೇ ಶತಕ ದಾಖಲಿಸಿದರು. ಆ ಮೂಲಕ 13 ಸಾವಿರ ರನ್ ಪೂರ್ಣಗೊಳಿಸಿದರು. ವಿರಾಟ್ 122 (ಎ: 94; 4X9, 6X3) ಮತ್ತು ಕೆ.ಎಲ್. ರಾಹುಲ್ 111 (ಎ: 106; 4X12; 6X2) ರನ್ ದಾಖಲಿಸಿದರು.
ರೋಹಿತ್ (56; 49ಎ, 4X6, 6X4) ಹಾಗೂ ಗಿಲ್ (58; 52, 4X10) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 121 ರನ್ ಸೇರಿಸಿ ಅಮೋಘ ಆರಂಭ ನೀಡಿದರು. ಅಂತಿಮವಾಗಿ
50 ಓವರ್ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 356 ರನ್ ದಾಖಲಿಸಿ ಪಾಕಿಸ್ತಾನಕ್ಕೆ 357 ರನ್ಗಳ ಗುರಿ ನೀಡಿತ್ತು.