ಸುಳ್ಯ: ಲತೀಫ್ ಹರ್ಲಡ್ಕ ಅವರ ಹರ್ಲ ಫೌಂಡೇಶನ್ ಇದರ ಲೋಗೋವನ್ನು ಅಖಿಲ ಭಾರತೀಯ ಜಂಯ್ಯತ್ತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಸಯ್ಯದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಅವೆಉ ಅನಾವರಣ ಗೊಳಿಸಿದರು. ಈ ಸಂದರ್ಭದಲ್ಲಿ
ಅಮೇರಿಕಾ ಪ್ರವಾಸ ಕೈಗೊಳ್ಳಲಿರುವ ತಂಙಳ್ ಅವರನ್ನು ಹರ್ಲ ಫೌಂಡೇಶನ್ ವತಿಯಿಂದ ಬಿಳ್ಕೊಡಲಾಯಿತು. ಲತೀಫ್ ಹರ್ಲಡ್ಕ, ಸೂಡ ಅಧ್ಯಕ್ಷ ಕೆ. ಎಂ.ಮುಸ್ತಫಾ, ಅನ್ಸಾರಿಯಾ ಮುದರಿಸ್ ಅಬೂಬಕ್ಕರ್ ಹಿಮಮಿ ಸಖಾಫಿ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕಬೀರ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.
















