ಸುಳ್ಯ:ಈ ಬಾರಿ ಬೇಸಿಗೆ ತೀವ್ರಗೊಂಡಿದ್ದು ಉಷ್ಣಾಂಶ ಹೆಚ್ಚಿದೆ. ಇದರಿಂದ ಭಾರೀ ಸೆಕೆ ಉಂಟಾಗಿದ್ದು ರಾತ್ರಿ, ಹಗಲೆನ್ನದೆ ಜನರು ಬೆವರಿ ಬಳಲುತ್ತಿದ್ದಾರೆ. ಸುಳ್ಯ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಷ್ಣಾಂಶ ಹೆಚ್ಚಿದ್ದು ಭಾರೀ
ಸೆಕೆಯ ಅನುಭವ ಆಗುತಿದೆ. ಗುರುವಾರ ಪುತ್ತೂರು, ಕಡಬ ಸೇರಿ ಕೆಲವೆಡೆ ಮಳೆಯಾಗಿದೆ.ರಾಜ್ಯದಲ್ಲಿ ಎಲ್ಲೆಡೆ ಬೇಸಿಗೆ ತನ್ನ ತೀವ್ರ ಮುಖ ತೋರಿಸುತ್ತಿದ್ದು, ಉಷ್ಣ ಅಲೆ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದ ಹಲವೆಡೆ ತಾಪಮಾನ ಏರಿಕೆಯಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕರಾವಳಿ ಸೇರಿ ಕರ್ನಾಟಕ ಭಾಗಗಳು ತಾಪಮಾನದಿಂದ ತತ್ತರಿಸುತ್ತಿವೆ. ಕೆಲವು ಪ್ರದೇಶಗಳಲ್ಲಿ ತಾಪಮಾನ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
















