ಗುರುವಾಯೂರು:ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ಇಂದು ದಾಖಲೆ ಸಂಖ್ಯೆಯ ವಿವಾಹ ನಡೆಯುತಿದೆ. ಒಂದಲ್ಲ, ಎರಡಲ್ಲ, ಹತ್ತಲ್ಲ, ನೂರಲ್ಲ.. ದೇವಸ್ಥಾನದಲ್ಲಿ ಇಂದು ದಾಖಲೆಯ 354 ಮದುವೆಗಳು ನಡೆಯುತ್ತಿದ್ದು ಶ್ರೀಕೃಷ್ಣನ ಸನ್ನಿಧಿಯಲ್ಲಿ ಗಟ್ಟಿಮೇಳದ ಸಂಭ್ರಮ. ಗುರುವಾಯೂರು ಕ್ಷೇತ್ರದಲ್ಲಿ ನಿರಂತರ
ಹತ್ತಾರು, ನೂರಾರು ವಿವಾಹಗಳು ನಡೆಯುತ್ತಾ ಬಂದಿದ್ದರೂ ಬರೋಬರಿ 354 ಜೋಡಿಗಳು ಹಸೆ ಮಣೆ ಏರುತ್ತಿರುವುದು ದಾಖಲೆಯೇ ಸರಿ. ಮದುವೆ ಸಂಖ್ಯೆ 363 ರವರೆಗೆ ಎರಿದ್ದರೂ 9 ಮದುವೆ ಪಾರ್ಟಿಗಳು ಆಗಮಿಸುವುದಿಲ್ಲ ಎಂದು ದೇವಸ್ವಂ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಸಂಖ್ಯೆ 354 ಆಗಿದೆ. ದೇವಸ್ಥಾನದಲ್ಲಿ ಇಷ್ಟು ವಿವಾಹಗಳು ಒಂದೇ ದಿನ ನಡೆಯುವುದು ಇದೇ ಮೊದಲು. ಪ್ರಸ್ತುತ ಇರುವ 4 ವಿವಾಹ ಮಂಟಪಗಳ ಜೊತೆಗೆ ದೇವಾಲಯದ ಮುಂಭಾಗದಲ್ಲಿ 2 ತಾತ್ಕಾಲಿಕ ಮಂಟಪಗಳನ್ನು ಸ್ಥಾಪಿಸಲಾಗಿದೆ. ವಧುವರರು ವಿವಾಹ ತಂಡಕ್ಕೆ ಟೋಕನ್ ತೆಗೆದುಕೊಂಡ ನಂತರ ವಿಶ್ರಾಂತಿ ಪಡೆಯುವುದಕ್ಕೆ ಮೇಲ್ಪುತ್ತೂರ್ ಆಡಿಟೋರಿಯಮ್ ಬಳಿ ನಿರ್ಮಿಸಿದ ಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುಂಜಾನೆ 4 ಗಂಟೆಯಿಂದ ವಿವಾಹಗಳು ಅರಂಭವಾದವು. ಪೊಟೋ ಗ್ರಾಫರ್ ಸೇರಿ ಒಂದು ವಿವಾಹ ತಂಡದಲ್ಲಿ 24 ಜನರಿಗೆ ಅವಕಾಶ ನೀಡಲಾಗಿದೆ.