ಸುಳ್ಯ:ಸುಳ್ಯದಲ್ಲಿ ಎಲ್ಲರೂ ಒಟ್ಟಾಗಿ ಒಂದಾಗಿ ನಿರ್ಮಿಸಿದ ಅಡಿಟೋರಿಯಂ ಸಮಾಜಕ್ಕೆ ಮಾದರಿ. ಈ ಐಕ್ಯತೆ ಅದ್ಭುತ ಮತ್ತು ಸಮಾಜಕ್ಕೆ ದೊಡ್ಡ ಸಂದೇಶ ನೀಡಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಬದ್ರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಹೇಳಿದ್ದಾರೆ.
ಸುಳ್ಯದ ಜಟ್ಟಿಪಳ್ಳದ ನಾವೂರು ರಸ್ತೆಯ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ಸಮೀಪ ನೂತನವಾಗಿ
ನಿರ್ಮಾಣವಾದ ಅತ್ಯಾಧುನಿಕ ಹಾಗೂ ಸುಸಜ್ಜಿತ ಸಭಾಂಗಣ ‘ಗಲ್ಫ್ ಅಡಿಟೋರಿಯಂ ಲೋಕಾರ್ಪಣೆ ಮಾಡಿ ಅವರು ಸಂದೇಶ ನೀಡಿದರು. ಈ ರೀತಿಯ ಐಕ್ಯತೆ ಮತ್ತು ಸಾಹೋದರ್ಯತೆಯಿಂದ, ಪ್ರೀತಿ, ವಿಶ್ವಾಸದಿಂದ ಅದ್ಭುತವನ್ನು ಸಾಧಿಸಬಹುದು ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿಯವರು ಮಾತನಾಡಿ ಶುಭ ಹಾರೈಸಿದರು. ಸುಳ್ಯ ತಾಲೂಕು ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಕುಂಞಿಕೋಯ ಸಅದಿ ತಂಙಳ್, ಸಯ್ಯಿದ್ ತ್ವಾಹಿರ್ ಸಅದಿ ತಂಙಳ್, ಅಬೂಬಕ್ಕರ್ ಹಿಮಮಿ ಸಖಾಫಿ, ಇಬ್ರಾಹಿಂ ಫೈಝಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಅನ್ಸಾರಿಯಾ ಗಲ್ಫ್ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಸಲೀಂ ಇಸ್ಮಾಯಿಲ್, ಉಪಾಧ್ಯಕ್ಷ ಮುನೀರ್ ಜಟ್ಟಿಪಳ್ಳ, ಕೋಶಾಧಿಕಾರಿ ಎಸ್.ಎಂ.ಅಬ್ದುಲ್ ಹಮೀದ್, ಸಿದ್ದಿಕ್ ಬಹರೈನ್, ಅಬ್ದುಲ್ ಖಾದರ್ ಪಟೇಲ್, ಉದ್ಯಮಿ
ಅಬ್ದುಲ್ ರಹಿಮಾನ್ ಸಂಕೇಶ್, ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷ ಕೆ.ಎಂ.ಮಹಮ್ಮದ್, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ,ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಅಬ್ದುಲ್ಲಾ ಕಟ್ಟೆಕ್ಕಾರ್ಸ್, ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ,ಮಹಮ್ಮದ್ ಕುಂಞಿ ಗೂನಡ್ಕ, ಶಾಫಿ ಕುತ್ತಮೊಟ್ಟೆ, ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಅನ್ಸಾರಿಯಾ ಕಾರ್ಯದರ್ಶಿಗಳಾದ ಎ.ಬಿ.ಅಬ್ದುಲ್ ಕಲಾಂ, ಶರೀಫ್ ಜಟ್ಟಿಪಳ್ಳ,ಸಲಹಾ ಸಮಿತಿ ಸದಸ್ಯರಾದ
ಮಹಮ್ಮದ್ ಇಕ್ಬಾಲ್ ಎಲಿಮಲೆ, ಇಕ್ಬಾಲ್ ಕನಕಮಜಲು, ಮುನೀರ್ ಜಟ್ಟಿಪಳ್ಳ, ನ.ಪಂ. ಸದಸ್ಯರುಗಳಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ನಾಮ ನಿರ್ದೇಶಕ ಸದಸ್ಯ ಸಿದ್ದಿಕ್ ಕೊಕ್ಕೊ, ಮುಖಂಡರುಗಳಾದ ಹಾಜಿ ಅದಂ ಕಮ್ಮಾಡಿ, ಹಮೀದ್ ಬೀಜಕೊಚ್ಚಿ, ಮೊದಲಾದವರು ಉಪಸ್ಥಿತರಿದ್ದರು. ಅನ್ಸಾರಿಯಾ ಖತೀಬ್ ಹಾಫಿಳ್ ಹಾಮಿದ್ ಸಖಾಫಿ ಸ್ವಾಗತಿಸಿದರು.
ಕೆ.ಬಿ.ಅಬ್ದುಲ್ ಮಜೀದ್, ಅಬ್ದುಲ್ಲ ಹಿಮಮಿ, ಎ.ಬಿ.ಕಮಾಲ್, ಇಕ್ಬಾಲ್ ಕನಕಮಜಲು ಕಾರ್ಯಕ್ರಮ ನಿರೂಪಿಸಿದರು.