ಕನಕಮಜಲು:ಕೊಚ್ಚಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಸುಳ್ಯ ಕನಕಮಜಲಿನ ಇಯಾಸ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಭಾನುವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕನಕಮಜಲು ಸುಣ್ಣಮೂಲೆಯ ಪೆಲತ್ತಡ್ಕ ಇಬ್ರಾಹಿಂ ಅವರ ಪುತ್ರ ಕೊಚ್ಚಿಯಲ್ಲಿ ಉದ್ಯೋಗದಲ್ಲಿದ್ದ ಇಯಾಜ್ ಅವರು ಅ.10 ರಂದು
ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು.ಇಂದು ಬೆಳಿಗ್ಗೆ ಇವರ ಮನೆಗೆ ಭೇಟಿ ನೀಡಿದ ಸಚಿವರು ಮನೆಯವರಿಗೆ ಸಾಂತ್ವನ ಹೇಳಿದರು. ಕೆಲ ತಿಂಗಳ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದಾಗ ಮರದಿಂದ ಬಿದ್ದು ಬೆನ್ನುಮೂಲೆ ಮುರಿತಕ್ಕೊಳಗಾಗಿರುವ ಕನಕಮಜಲಿನ ರಾಮ ಎಂಬವರ ಪುತ್ರ ಯತೀಶ ಪಂಜಿಗುಂಡಿ ಅವರನ್ನು ಮನೆಯವರು ಕರೆ ತಂದು ಸಚಿವರ ಭೇಟಿ ಮಾಡಿಸಿದರು.ಗಾಯಾಳುವನ್ನು ಮತ್ತು ಅವರ
ತಾಯಿಯನ್ನು ಮಾತನಾಡಿಸಿದ ಸಚಿವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ತೆಗೆಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಾಫ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಸರಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಶಹೀದ್ ಪಾರೆ, ವಕೀಲ ಪವಾಜ್ ಕನಕಮಜಲು, ಇಕ್ಬಾಲ್ ಸುಣ್ಣಮೂಲೆ, ಇಕ್ಬಾಲ್ ಕನಕಮಜಲು, ವಿಜಯ ಕುಮಾರ್ ನರಿಯೂರು, ಹೇಮನಾಥ ಕುತ್ಯಾಳ, ಹಮೀದ್ ಸುಣ್ಣಮೂಲೆ, ಇಬ್ರಾಹಿಂ ಖಾಸಿಂ, ಇಬ್ರಾಹಿಂ ಪೆಲತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.










