ಸುಳ್ಯ:ಅ.24ರಂದು ಸುಳ್ಯ ನಗರದಲ್ಲಿ ಸುಳ್ಯ ದಸರಾ ಶೋಭಾಯಾತ್ರೆ ನಡೆಯುವ ಹಿನ್ನಲೆಯಲ್ಲಿ ಸುಳ್ಯ ನಗರದ ರಸ್ತೆಯ ಎರಡೂ ಬದಿಯಲ್ಲಿ ವಾಹನ ಪಾರ್ಕಿಂಗ್ ಅವಕಾಶ ಇಲ್ಲ ಎಂದು ನಗರ ಪಂಚಾಯತ್ ಸೂಚನೆ ನೀಡಿದೆ. ಈ ಕುರಿತು
ಆದೇಶ ಹೊರಡಿಸಿರುವ ನಗರ ಪಂಚಾಯತ್ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಜ್ಯೋತಿಸರ್ಕಲ್ ನಿಂದ ಗಾಂಧಿನಗರ ತನಕ ಈಗಾಗಲೇ ಪ್ರತಿ ದಿನ ವಾಹನ ಪಾರ್ಕಿಂಗ್ ಗೆ ಅನುಕೂಲವಾಗುವಂತೆ ಸಮ ಮತ್ತು ಬೆಸ ಸಂಖ್ಯೆಯ ದಿನಾಂಕಗಳಂದು ನಿರ್ದಿಷ್ಟಪಡಿಸಿದ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ದಸರಾ ಉತ್ಸವ 2026ರ ಶೋಭಾಯಾತ್ರೆ ಪ್ರಯುಕ್ತ ದಿನಾಂಕ ಅ.24 ರಂದು ಈ ನಿರ್ದಿಷ್ಟಪಡಿಸಿದ ಸ್ಥಳಗಳಲ್ಲಿ ಎಲ್ಲಾ ವಾಹನ ಪಾರ್ಕಿಂಗ್ನ್ನು ನಿಷೇಧಿಸಲಾಗಿದೆ ನಗರ ಪಂಚಾಯತ್ ತಿಳಿಸಿದೆ.










