ಸೌತಾಂಪ್ಟನ್:ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿಯೂ 56 ರನ್ಗಳ ಭರ್ಜರಿ ಜಯ ದಾಖಲಿಸಿದ ಇಂಗ್ಲೆಂಡ್4-0 ಅಂತರದಲ್ಲಿ ಸರಣಿ ಜಯಿಸಿತು.ಮೊದಲ ಪಂದ್ಯ ಮಳೆ ಕಾರಣ ರದ್ದಾಗಿತ್ತು. ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ ಒಂದೇ ಒಂದು ಪಂದ್ಯ ಗೆಲ್ಲಲಾಗದೆ ತೀವ್ರ ನಿರಾಸೆ ಅನುಭವಿಸಿತು.ಮೊದಲು
ಬ್ಯಾಟ್ ಮಾಡಿದ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 257 ರನ್ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಭಾರತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಭಾರತದ ಪರ ಇಸಾನ್ ಕಿಶನ್(56), ತಿಲಕ್ ವರ್ಮ(53) ಅರ್ಧ ಶತಕ ಸಿಡಿಸಿದರು. ಸಂಜು ಸಾಮ್ಸನ್(26), ನಾಯಕ ಶ್ರೇಯಸ್ ಅಯ್ಯರ್ (28) ರನ್ ಬಾರಿಸಿದರು.
ಇದಕ್ಕೂ ಮುನ್ನ ಜೋಸ್ ಬಟ್ಲರ್ (131) ಶತಕ ಹಾಗೂ ನಾಯಕ ಹ್ಯಾರಿ ಬ್ರೂಕ್ (95*) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಬೃಹತ್ ಸ್ಕೋರ್ ದಾಖಲಿಸಿತು. ನಾಯಕ ಹ್ಯಾರಿ ಬ್ರೂಕ್ ಹಾಗೂ ಜೋಸ್ ಬಟ್ಲರ್ ಎರಡನೇ ವಿಕೆಟ್ಗೆ ಕೇವಲ 102 ಎಸೆತಗಳಲ್ಲಿ ಬರೊಬ್ಬರಿ 233 ರನ್ಗಳ ಜೊತೆಯಾಟ ಆಡಿದರು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತದ ವಿರುದ್ಧ ದಾಖಲಾದ ಅತ್ಯುನ್ನತ ಮತ್ತು ಐತಿಹಾಸಿಕ ಜೊತೆಯಾಟವಾಗಿದೆ. ಜೋಸ್ ಬಟ್ಲರ್ ಕೇವಲ 64 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ಗಳ ನೆರವಿನಿಂದ 131 ರನ್ ಚಚ್ಚಿದರು. ಹ್ಯಾರಿ ಬ್ರೂಕ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರು 45 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 95 ರನ್ ಗಳಿಸಿ ಅಜೇಯರಾಗುಳಿದರು.





