ಫ್ಲೋರಿಡಾ: ಜೂಡ್ ಬೆಲ್ಲಿಂಗ್ಹ್ಯಾಮ್ ಗಳಿಸಿದ ಎರಡು ಗೋಲುಗಳ ಬಲದಿಂದ ಇಂಗ್ಲೆಂಡ್ ತಂಡವು ನಾರ್ವೆಯನ್ನು ಸೋಲಿಸಿ, ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಆಂಡ್ರೀಸ್ ಶೆಲ್ಡೆರಪ್ ಅವರು
36ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ನಾರ್ವೆಗೆ ಮುನ್ನಡೆ ತಂದುಕೊಟ್ಟರು. 11 ನಿಮಿಷಗಳ ಅಂತರದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದ ಬೆಲ್ಲಿಂಗ್ಹ್ಯಾಮ್, ಹೋರಾಟವನ್ನು ಸಮಬಲಗೊಳಿಸಿದರು. ನಂತರ ಹೆಚ್ಚುವರಿ ಅವಧಿಯಲ್ಲಿ (93 ನಿಮಿಷ) ಮತ್ತೊಂದು ಗೋಲು ಸಿಡಿಸುವ ಮೂಲಕ ಗೆಲುವನ್ನು ಖಾತ್ರಿ ಪಡಿಸಿದರು.





