ಸುಳ್ಯ:ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಹಾಗು ಮಹಿಳಾ ಸಮಾಜ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮ ನಡೆಯಿತು. ತಾಲೂಕು ಒಕ್ಕೂಟದ
ಅಧ್ಯಕ್ಷೆ ಪುಷ್ಪಾ ಡಿ ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಒಕ್ಕೂಟದ ಮಾಜಿ ಅಧ್ಯಕ್ಷೆ ಹರಿಣಿ ಸದಾಶಿವ ಹಾಗು ತಾಲೂಕು ಒಕ್ಕೂಟದ ಮಾಜಿ ಅಧ್ಯಕ್ಷೆ ಪ್ರಫುಲ್ಲಾ ರೈ ನುಡಿನಮನ ಸಲ್ಲಿಸಿದರು. ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾ ಮಾಣಿಬೆಟ್ಟು ಸ್ವಾಗತಿಸಿದರು.ಒಕ್ಕೂಟದ ಸಹಕಾರ್ಯದರ್ಶಿ ಜಲಜಾಕ್ಷಿ ಎಂ ಶೆಟ್ಟಿ ಪ್ರಾರ್ಥಿಸಿ, ಒಕ್ಕೂಟದ ಖಜಾಂಚಿ ಚಂದ್ರಾಕ್ಷಿ ಜೆ ರೈ ವಂದಿಸಿದರು. ಒಕ್ಕೂಟದ ಕಾರ್ಯದರ್ಶಿ ಹೇಮಾ ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಒಕ್ಕೂಟದ ಮತ್ತು ಮಹಿಳಾ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.





