ಬ್ರಿಜ್ಟೌನ್: ವೇಗಿ ಕ್ರಿಸ್ ಜೋರ್ಡನ್ ಅವರ ಹ್ಯಾಟ್ರಿಕ್ ಮತ್ತು ಜೋಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್ ತಂಡವು ಅಮೆರಿಕ ವಿರುದ್ಧ ಸುಲಭ ಜಯ ಸಾಧಿಸಿತು.ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಸೂಪರ್ 8ರ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್ಗಳಿಂದ ಜಯಿಸಿತು. ಇದರೊಂದಿಗೆ ಸೂಪರ್ ಎಂಟರ ಹಂತದಲ್ಲಿ
ಒಟ್ಟು ನಾಲ್ಕು ಅಂಕ ಗಳಿಸಿ, ಸೆಮಿಫೈನಲ್ಗೆ ಅರ್ಹತೆ ಪಡೆಯಿತು. ಟಾಸ್ ಗೆದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಮೆರಿಕ ತಂಡವು 18.5 ಓವರ್ಗಳಲ್ಲಿ 115 ರನ್ ಗಳಿಸಿತು. ಅದಕ್ಕುತ್ತರವಾಗಿ ಇಂಗ್ಲೆಂಡ್ ತಂಡವು 9.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 117 ರನ್ ಗಳಿಸಿ ಜಯಿಸಿತು.ಫಿಲಿಪ್ ಸಾಲ್ಟ್ (ಔಟಾಗದೆ 25, 21ಎ, 4X2) ಮತ್ತು ಜೋಸ್ ಬಟ್ಲರ್ (ಔಟಾಗದೆ 83; 38ಎ, 4X6, 6X7) ಅಬ್ಬರಿಸಿದರು.
ಕ್ರಿಸ್ ಹ್ಯಾಟ್ರಿಕ್: ಅಮೆರಿಕದ ಇನಿಂಗ್ಸ್ನ 19ನೇ ಓವರ್ನಲ್ಲಿ ಕ್ರಿಸ್ ಜೋರ್ಡನ್ ಅವರು ಒಟ್ಟು ನಾಲ್ಕು ವಿಕೆಟ್ ಗಳಿಸಿದರು. ಮೊದಲ ಎಸೆತದಲ್ಲಿ ಕೋರಿ ಆ್ಯಂಡರ್ಸನ್ ವಿಕೆಟ್ ಪಡೆದರು. ಮೂರು, ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಕ್ರಮವಾಗಿ ಅಲಿ ಖಾನ್, ನಾಸ್ತುಷ್ ಕೆಂಜಿಗೆ ಹಾಗೂ ಸೌರಭ್ ನೇತ್ರಾವಳ್ಕರ್ ವಿಕೆಟ್ಗಳನ್ನು ಗಳಿಸಿ ಹ್ಯಾಟ್ರಿಕ್ ಸಾಧಿಸಿದರು. ಅಮೇರಿಕ ಪರ ಆದರೆ ನಿತೀಶ್ ಕುಮಾರ್ (30 ರನ್) ಮತ್ತು ಸ್ಟೀವನ್ ಟೇಲರ್ (12 ರನ್) ಅವರಿಬ್ಬರೂ ವೇಗವಾಗಿ ರನ್ ಗಳಿಸಿದರು. ಚೇತರಿಕೆ ನೀಡಿದರು.