ಸುಳ್ಯ:ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪ್ರೀಮಿಯರ್ ಲೀಗ್ (ಇಪಿಎಲ್-2025) ಕ್ರಿಕೆಟ್ ಪಂದ್ಯಾಟ ದಿನಾಂಕ ಕೆ.ವಿ.ಜಿ. ಆಟದ ಮೈದಾನದಲ್ಲಿ ನಡೆಯಿತು. ಡಾ. ರೇಣುಕಾಪ್ರಸಾದ್ ಕೆ.ವಿ. ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ಕ್ರಿಕೆಟ್ ಅಂದರೆ ಅದು ಕೇವಲ ಒಂದು ಆಟವಲ್ಲ, ಇದು ನಮಗೆ ತಾಳ್ಮೆ, ಸಂಘಟನೆ ಮತ್ತು ನಿರಂತರತೆಯ ಮಹತ್ವವನ್ನು ಕಲಿಸುತ್ತದೆ ಎಂದು ಹೇಳಿ, ಉತ್ತಮ ಶಿಕ್ಷಣದ ಜೊತೆಗೆ
ಮಕ್ಕಳ ಪೂರಕವಾದ ಕ್ರೀಡೆ ಮತ್ತು ಸಾಂಸ್ಕೃತಿಕ ವೇದಿಕೆ ನೀಡುವುದು ಅಗತ್ಯ ಎಂದರು.ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ಉಜ್ವಲ್ ಯು.ಜೆ. ಮಾತನಾಡಿ ಕಠಿಣ ಪರಿಶ್ರಮ, ಶಿಸ್ತು, ಶ್ರದ್ಧೆ ಇವೇ ಮುಂತಾದವುಗಳನ್ನು ಒಳಗೊಂಡ ಅಧ್ಯಯನವು ವಿದ್ಯಾರ್ಥಿಗಳಿಗೆ ಯಶಸ್ಸನ್ನು ತಂದು ಕೊಡುತ್ತವೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ವಹಿಸಿದ್ದರು. ವಿ.ಜೆ. ವಿಖ್ಯಾತ್ ಶುಭ ಹಾರೈಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ., ಆಡಳಿತಾಧಿಕಾರಿ ಶ್ರೀ ನಾಗೇಶ್ ಕೊಚ್ಚಿ, ಡಾ. ಚಂದ್ರಶೇಖರ್ ಎ., ಡೀನ್-ಅಡ್ಮಿಶನ್ ಡಾ. ಬಾಲಪ್ರದೀಪ್ ಕೆ.ಎನ್, ಡೀನ್-ಅಕಾಡೆಮಿಕ್ ಡಾ. ಪ್ರಜ್ಞಾ ಎಂ.ಆರ್., ಪ್ರಶಾಂತ್ ಕಕ್ಕಾಜೆ, ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಪ್ರೊ. ಲೋಕೇಶ್ ಪಿ.ಸಿ, ಕ್ರೀಡಾ ಸಂಯೋಜಕರಾದ ಪ್ರೊ. ಅಜಿತ್ ಬಿ.ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಜೇಶ್ ಕುಮಾರ್ ಎಂ.ಎಸ್., ಪ್ರಶಾಂತ್ ಕೆ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ರೀಡಾ ಕೂಟದಲ್ಲಿ ಕಾಲೇಜಿನ 24 ತಂಡಗಳು ಭಾಗವಹಿಸಿದ್ದವು.