ಸುಳ್ಯ:2025-26 ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ಕಾರ್ಯಕ್ರಮದಡಿ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ 2.10 ಕೋಟಿ ಅನುದಾನ ಬಿಡುಗಡೆ ಅನುಮೋದನೆಗೊಂಡಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಸ.ಕಿ.ಪ್ರಾ ಶಾಲೆ ರಂಗತ್ತಮಲೆ ಬಳಿ 300 ಮೀಟರ್ ರಸ್ತೆ ಡಾಂಬರೀಕರಣ -10 ಲಕ್ಷ, ಸುಳ್ಯ ತಾಲ್ಲೂಕು ಮುರುಳ್ಯ ಗ್ರಾಮದ
ಮಾಣಿಯಡ್ಕ – ಪುಣಚತ್ತಾರು ರಸ್ತೆ ಕಾಮಗಾರಿ 25ಲಕ್ಷ, ಮರ್ಕಂಜ ಗ್ರಾಮದ ಬೊಮ್ಮಾರು – ಕೊಟ್ರಡ್ಕ ಡ್ಕ ರಸ್ತೆ ಕಾಮಗಾರಿಗೆ 25ಲಕ್ಷ, ಅರಂತೋಡು ಗ್ರಾಮದ ಅರಂತೋಡು ಪಿಂಗಾರ ತೋಟ ಅಡ್ಕಬಳೆ -ರೆಂಜಾಳ ರಸ್ತೆ ಕಾಮಗಾರಿ 25ಲಕ್ಷ,
ಐವರ್ನಾಡು ಗ್ರಾಮದ ಕೃಷಿ ಕಾಲೋನಿ ರಸ್ತೆ ಕಾಮಗಾರಿಗೆ 30 ಲಕ್ಷ, ಅಮರಮುಡ್ನೂರು ಗ್ರಾಮದ ಶಾಂತಿಮೂಲೆ -ಕಡಪಾಲ ರಸ್ತೆ ಕಾಮಗಾರಿಗೆ 10ಲಕ್ಷ, ಅಲೆಟ್ಟಿ ಗ್ರಾಮದ ಆಸ್ಪಾರೆ-ಆಲೆಟ್ಟಿ ರಸ್ತೆ ಕಾಮಗಾರಿಗೆ 25 ಲಕ್ಷ ಜಾಲ್ಸೂರು ಗ್ರಾಮದ ಕೆಮನಬಳ್ಳಿ ರಸ್ತೆ ಕಾಮಗಾರಿ 10 ಲಕ್ಷ, ಕೊಡಿಯಾಲ ಗ್ರಾಮದ ಕಲ್ಲಗದ್ದೆ – ಪೊಟ್ರೆ- ಗ್ರಾಮ ಪಂಚಾಯತ್ ಕಛೇರಿವರೆಗೆ ರಸ್ತೆ ಕಾಮಗಾರಿ 25 ಲಕ್ಷ,1 ಉಬರಡ್ಕ ಮಿತ್ತೂರು ಗ್ರಾಮದ ಕಕ್ಕೆಬೆಟ್ಟು-ಚೆನ್ನಡ್ಕ ರಸ್ತೆ ಕಾಮಗಾರಿಗೆ 25 ಲಕ್ಷ
ಅನುದಾನ ಬಿಡುಗಡೆ ಮಾಡಿದೆ.







