ರಾಜಪುರಂ: ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಕಂಪನದ ಅನುಭವ ಆಗಿರುವ ಬಗ್ಗೆ ವರದಿಯಾಗಿದೆ.
ಇಂದು ಬೆಳಗಿನ ಜಾವ 1.35-1.40 ಮಧ್ಯೆಯ ಸಮಯದಲ್ಲಿ ಭಾರೀ ಶಬ್ದದೊಂದಿಗೆ
ಭೂಕಂಪನ ಸಂಭವಿಸಿದೆ.ಕೋಡೋಂ ಬೇಳೂರ್, ವೆಸ್ಟ್ ಎಳೇರಿ, ಕಿನಾನೂರ್ ಕರಿಂದಳಂ, ಬಳಾಲ್ ಪಂಚಾಯತ್ಗಳ
ಪರಪ್ಪ, ಒಡೆಯಂಚಲ್, ಬಳಾಲ್, ಕೊಟ್ಟೋಡಿ, ಚುಳ್ಳಿಕ್ಕರ, ಮತ್ತು ಪೂಡಂಕಲ್ಲು ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಶಬ್ದ ಕೇಳಿ ಬಂದು ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಭಾರೀ ಶಬ್ದದಿಂದ ಜನರು ಆತಂಕಗೊಂಡಿದ್ದಾರೆ.