ಬೆಂಗಳೂರು:ಕೇಂದ್ರ ವಲಯವನ್ನು 4 ವಿಕೆಟ್ಗಳಿಂದ ಸೋಲಿಸಿ
ಪೂರ್ವ ವಲಯ ತಂಡ 13 ವರ್ಷಗಳ ನಂತರ ದುಲೀಪ್ ಟ್ರೋಫಿ ಫೈನಲ್ಗೆ ಲಗ್ಗೆ ಇಟ್ಟಿದೆ.ಇದೇ 6ರಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ. ಸೋಮವಾರ ಮೊದಲ ಇನಿಂಗ್ಸ್ ಟೈ ಆಗಿತ್ತು. ಎರಡನೇ ಇನಿಂಗ್ಸ್ ಆರಂಭಿಸಿದ್ದ
ಕೇಂದ್ರ ವಲಯವು ಪೂರ್ವ ತಂಡದ ಅನುಭವಿ ಬೌಲರ್ಗಳಾದ ಮುಕೇಶ್ ಕುಮಾರ್ (44ಕ್ಕೆ4) ಮತ್ತು ಮೊಹಮ್ಮದ್ ಶಮಿ (56ಕ್ಕೆ3) ಅವರ ದಾಳಿಯ ಮುಂದೆ 158 ರನ್ಗಳಿಗೆ ಕುಸಿಯಿತು. ಪೂರ್ವ ವಲಯವು 39.3 ಓವರ್ಗಳಲ್ಲಿ 6 ವಿಕೆಟ್ಗಳಿಗೆ 162 ರನ್ ಗಳಿಸಿ ಗೆದ್ದಿತು. ಗುರಿ ಬೆನ್ನಟ್ಟಿದ ತಂಡದ ಅರಂಭಿಕ ಜೋಡಿ ಅಭಿಮನ್ಯು ಈಶ್ವರನ್ (24; 55ಎ, 6X1) ಹಾಗೂ ವೈಭವ್ (40; 43ಎ, 4×3, 6×2) ಉತ್ತಮ ಅಡಿಪಾಯ ಹಾಕಿದರು.
ಮೊದಲ ಇನಿಂಗ್ಸ್ನಲ್ಲಿ ವೈಭವ್ 92 ರನ್ ಗಳಿಸಿದ್ದರು.ನಾಯಕ ಇಶಾನ್ ಕಿಶನ್ (ಅಜೇಯ 39; 41ಎ, 4×4, 6×1) ಮತ್ತು ಕುಮಾರ ಕುಶಾಗ್ರ (22; 40ಎ, 4×2) ಅವರು ಗೆಲುವಿನ ಹಾದಿ ಸುಗಮಗೊಳಿಸಿದರು.
ಮೊದಲ ಇನಿಂಗ್ಸ್ನಲ್ಲಿ ಕೇಂದ್ರ ವಲಯ 266. ಪೂರ್ವ ವಲಯ 266. ಎರಡನೇ ಇನಿಂಗ್ಸ್: ಕೇಂದ್ರ ವಲಯ: 158 (ಅಮನ್ ಮೊಖಡೆ 41, ರಿಂಕು ಸಿಂಗ್ 20, ಹರ್ಷ ದುಬೆ 24, ಅರ್ಷದ್ ಖಾನ್ 25, ಮುಕೇಶ್ ಕುಮಾರ್ 44ಕ್ಕೆ4, ಮೊಹಮ್ಮದ್ ಶಮಿ 56ಕ್ಕೆ3) ಪೂರ್ವ ವಲಯ 6ಕ್ಕೆ162 (ಅಭಿಮನ್ಯು ಈಶ್ವರನ್ 24, ವೈಭವ್ ಸೂರ್ಯವಂಶಿ 40, ಕುಮಾರ್ ಕುಶಾಗ್ರ 22, ಇಶಾನ್ ಕಿಶನ್ ಔಟಾಗದೇ 39; ಹರ್ಷ ದುಬೆ 53ಕ್ಕೆ4).










