ಕೊಲಂಬೊ:ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ಮಧ್ಯೆಯ 2ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಕನ್ನಡಿಗ ದೇವದತ್ತ ಪಡಿಕ್ಕಲ್ ಮತ್ತೊಮ್ಮೆ ಮಿಂಚಿದರು. ಪಡಿಕಲ್ ಶತಕ ಮತ್ತು ನಾಯಕ ಶುಭಮನ್ ಗಿಲ್ ಅರ್ಧ ಶತಕದ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದೆ.ಟಾಸ್ ಗೆದ್ದು
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಮೊದಲ ಗಿಲ್ ಭರ್ಜರಿ 108 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ ಅರ್ಧಶತಕ (50) ಗಳಿಸಿದ ಗಿಲ್, ದೇವದತ್ ಪಡಿಕಲ್ ಜೊತೆ 3ನೇ ವಿಕೆಟ್ಗೆ 120 ರನ್ಗಳ ಉತ್ತಮ ಜೊತೆಯಾಟ ಕಟ್ಟಿದರು. ಸತತ ಎರಡನೇ ಟೆಸ್ಟ್ನಲ್ಲಿಯೂ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದ ಪಡಿಕಲ್ 193 ಎಸೆತಗಳಲ್ಲಿ 12 ಬೌಂಡರಿ ಬಾರಿಸುವ ಮೂಲಕ 117 ರನ್ ಸಿಡಿಸಿದರು. ಉಳಿದಂತೆ ಯಶಸ್ವಿ ಜೈಸ್ವಾಲ್ (45), ಕೆ.ಎಲ್. ರಾಹುಲ್ (18), ರವೀಂದ್ರ ಜಡೇಜಾ (ಅಜೇಯ 43), ಧ್ರುವ್ ಜ್ಯುರೆಲ್ (ಅಜೇಯ 7) ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಇನ್ನು ರಿಟೈಡ್ ಹರ್ಟ್ ಅಡಿ ಹೊರಹೋಗಿರುವ ರಿಷಬ್ ಪಂತ್, ಖಾತೆ ತೆರೆಯಬೇಕಿದೆ.








