ಆ್ಯಮಸ್ಟೆಲ್ವೀನ್: ಭಾರತ ಪುರುಷರ ಹಾಕಿ ತಂಡವು ಎಫ್ಐಎಚ್ ಹಾಕಿ ವಿಶ್ವಕಪ್ನ ಎರಡನೇ ಸುತ್ತಿನ ಅಂತಿಮ ಪಂದ್ಯದಲ್ಲಿ ಅರ್ಜೆಂಟೀನಾ ಎದುರು 3-5 ಗೋಲುಗಳ ಅಂತರದಿಂದ ಸೋಲನುಭವಿಸಿ, ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ.ಭಾರತವು ಸೆಮಿಫೈನಲ್ ರೇಸ್ನಲ್ಲಿ ಉಳಿಯಲು ಈ ಪಂದ್ಯದಲ್ಲಿ
ಕನಿಷ್ಠ ಎರಡು ಗೋಲುಗಳ ಅಂತರದ ಗೆಲುವು ಅಗತ್ಯವಿತ್ತು.ಈ ಪಂದ್ಯದಲ್ಲಿ ಅರ್ಜೆಂಟೀನಾ ಪರ ಟಾಮಸ್ ಡೊಮೆನೆ (33 ಮತ್ತು 45ನೇ ನಿಮಿಷ) ಹಾಗೂ ಜೋವಾಕಿನ್ ಟೋಸ್ಕಾನಿ (1ನೇ ಮತ್ತು 53ನೇ ನಿಮಿಷ) ತಲಾ ಎರಡು ಗೋಲು ಗಳಿಸಿದರೆ, ನಿಕೋಲಸ್ ಡೆಲ್ಲಾ ಟೊರೆ 6ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು.ಭಾರತದ ಪರ ಸುಖ್ಜೀತ್ ಸಿಂಗ್ 34 ಮತ್ತು 58ನೇ ನಿಮಿಷಗಳಲ್ಲಿ ಎರಡು ಗೋಲುಗಳನ್ನು ಗಳಿಸಿದರು. ಪಂದ್ಯದ ಅಂತಿಮ ಹಂತದಲ್ಲಿ ದೊರೆತ ಪೆನಾಲ್ಟಿ ಸ್ಟ್ರೋಕ್ ಅನ್ನು ಹಾರ್ದಿಕ್ ಸಿಂಗ್ ಗೋಲಾಗಿ ಪರಿವರ್ತಿಸಿ, ಸೋಲಿನ ಅಂತರವನ್ನು ಕೊಂಚ ತಗ್ಗಿಸಿದರು.









