ದುಗ್ಗಲಡ್ಕ: ದುಗ್ಗಲಡ್ಕದಂತಹ ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ಮತ ಭೇದ ವಿಲ್ಲದೆ ಕಷ್ಟ ಕಾರ್ಪಣ್ಣ್ಯ ಗಳಿಗೆ ಸ್ಪಂದಿಸಿದ ಪುಣ್ಯ ಪುರುಷರ ಜೀವನ ಇಂದಿಗೂ ಪ್ರಸ್ತುತ ಎಂದು ಕರ್ನಾಟಕ ವಿಧಾನ ಸಭೆ ಯ ಸ್ಪೀಕರ್ ಯು. ಟಿ. ಖಾದರ್ ಹೇಳಿದರು .ದುಗ್ಗಲಡ್ಕ ಸಯ್ಯದ್ ಫಕ್ರುದ್ದೀನ್ ತಂಙಳ್ ರವರ ಊರೂಸ್ ಸಮಾರಂಭ, 31ನೇ ಖುತುಬಿಯ್ಯತ್ ಆಂಡ್ ನೇರ್ಚೆ ಮತ್ತು
ಧರ್ಗಾ ಶರೀಫ್ ನ ಆಗಮನ ರಸ್ತೆಗೆ ಉದ್ಯಮಿ ಅಬ್ದುರ್ರಹ್ಮಾನ್ ಸಂಕೇಶ್ ಸೇವಾ ರೂಪದಲ್ಲಿ ದಾನವಾಗಿ ನಿರ್ಮಿಸಿಕೊಟ್ಟ ಮಹಾ ದ್ವಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಅಸ್ಸಯ್ಯದ್ ಜೈನುಲ್ ಆಬಿದೀನ್ ತಂಙಳ್ ಮಾತನಾಡಿ ಧಾರ್ಮಿಕ ಕೇಂದ್ರಗಳು ಶಾಂತಿಯ ಕೇಂದ್ರವಾಗಲು ಮಹಾ ಪುರುಷರು ಬದುಕಿದ ರೀತಿ ಎಲ್ಲರಿಗೂ ಮಾದರಿ ಎಂದರು.
ವೇದಿಕೆಯಲ್ಲಿ ಸಯ್ಯದ್ ಫಝಲ್ ತಂಙಳ್, ಸಯ್ಯದ್ ಜಲಾಲುದ್ದೀನ್ ತಂಙಳ್, ಕೆಪಿಸಿಸಿ ಕಾರ್ಯದರ್ಶಿ ಟಿ. ಎಂ. ಶಹೀದ್ ತೆಕ್ಕಿಲ್, ಯು. ಟಿ. ಸುಲ್ಫಿಕರ್, ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ಲ ಹಾಜಿ, ಉದ್ಯಮಿ ಅಬ್ದುರ್ರ ಹ್ಮಾನ್ ಸಂಕೇಶ್, ಕಂಟ್ರಾಕ್ಟರ್ ಮೂಸ ಹಾಜಿ ಕಾಸರಗೋಡು, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಮಹಮ್ಮದ್ ಇಕ್ಬಾಲ್ ಎಲಿಮಲೆ, ನಗರ ಪಂಚಾಯತ್ ಸದಸ್ಯರಾದ ಕೆ.ಎಸ್. ಉಮ್ಮರ್, ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ,ಉದ್ಯಮಿ ಅಬ್ದುಲ್ ರಜಾಕ್ ಹಾಜಿ ರಾಜಧಾನಿ ಆನಿವಾಸಿ ಉದ್ಯಮಿ ಮೂಸ, ಮೊದಲಾದವರು ಉಪಸ್ಥಿತರಿದ್ದರು, ಮೀಫ್ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸ್ವಾಗತಿಸಿ ವಂದಿಸಿದರು.