ಸುಳ್ಯ: ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಸುಳ್ಯ ತಾಲೂಕು ಕೃಷಿಕ ಸಮಾಜದ ಮುಂದಿನ 5 ವರ್ಷದ ಅವಧಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಡಿ.31ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ
ಅಧ್ಯಕ್ಷರಾಗಿ ಕುಸುಮಾಧರ ಎ.ಟಿ, ಉಪಾಧ್ಯಕ್ಷರಾಗಿ ಎ.ಎಸ್.ಕರುಣಾಕರ ಅಡ್ಪಂಗಾಯ, ಪ್ರಧಾನ ಕಾರ್ಯದರ್ಶಿಯಾಗಿ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ, ಕೋಶಾಧಿಕಾರಿಯಾಗಿ ಸವಿನ್ ಕಡಪಾಲ, ಜಿಲ್ಲಾ ಪ್ರತಿನಿಧಿಯಾಗಿ ಚಂದ್ರ ಕೋಲ್ಚಾರ್ ಆಯ್ಕೆಯಾದರು.

ಕುಸುಮಾಧರ ಎ.ಟಿ, ಕರುಣಾಕರ ಅಡ್ಪಂಗಾಯ
2025-26 ರಿಂದ 2029-30ನೇ ಸಾಲಿಗೆ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಜಿ ಹಾಗೂ ಜಿಲ್ಲಾ ಪ್ರತಿನಿಧಿಗಳ ಆಯ್ಕೆ ನಡೆಸಲಾಯಿತು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್ ಚುನಾವಣಾಧಿಕಾರಿಯಾಗಿದ್ದರು. ಕೃಷಿಕ ಸಮಾಜದ ನಿರ್ದೇಶಕರು ಉಪಸ್ಥಿತರಿದ್ದರು.
ಕೃಷಿಕ ಸಮಾಜದ 15 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು.
