ಸುಬ್ರಹ್ಮಣ್ಯ: ಡಾ.ನಿಂಗಯ್ಯ ಅವರು ತಮ್ಮ ಸುಧೀರ್ಘವಾದ ಸೇವಾಧಿಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರು. ತಮ್ಮ ಕರ್ತವ್ಯ ನಿಷ್ಠೆಯ ಮೂಲಕ ಉತ್ತಮ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಮತ್ತು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮೊಹಾಪತ್ರ ಹೇಳಿದರು.
೩೫ ವರ್ಷಗಳ ಸರಕಾರಿ ಸೇವೆಯಿಂದ ಸೇವಾ ನಿವೃತ್ತಿ ಹೊಂದಿದ
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ.ನಿಂಗಯ್ಯ ಅವರ ಪತ್ನಿ ನಾಗರತ್ನ,ಅವರ ಪುತ್ತಿಯರಾದ ನವ್ಯಶ್ರೀ, ನಿಧಿಶ್ರೀ, ಶ್ರೀ ದೇವಳದ ಎಇಒ ಯೇಸುರಾಜ್ ವೇದಿಕೆಯಲ್ಲಿದ್ದರು. ಸಮಾರಂಭದಲ್ಲಿ ಆಡಳಿತಾಧಿಕಾರಿಗಳು ಶಾಲು ಹೊದಿಸಿ ಶ್ರೀ ದೇವರ ಬೆಳ್ಳಿ ಪೋಟೋ ನೀಡಿ ಸನ್ಮಾನಿಸಿದರು.ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯಕುಮಾರ್, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಸಿಬ್ಬಂಧಿಗಳಾದ ರಾಜಲಕ್ಷ್ಮಿ, ಪಿ.ಶೆಟ್ಟಿಗಾರ್, ನಿಂಗಣ್ಣ ಗೌಡ, ಮಹೇಶ್ ಕುಮಾರ್.ಎಸ್ ಶುಭ ಹಾರೈಸಿದರು. ಸಿಬ್ಬಂಧಿಗಳಾದ ಪೂರ್ಣಿಮಾ ಮತ್ತು ಅರ್ಪಿತಾ ಪ್ರಾರ್ಥನೆ ಹಾಡಿದರು. ಅಭಿಯಂತರ ಉದಯ ಕುಮಾರ್, ಸ್ವಾಗತಿಸಿದರು. ಯೋಗೀಶ್.ಎಂ.ವಿಟ್ಲ ವಂದಿಸಿದರು.ಮಹೇಶ್ ಕುಮಾರ್.ಎಸ್ ನಿರೂಪಿಸಿದರು.