ಸುಳ್ಯ: ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದ ಕುಮಾರ್ ಬಿ.ಅವರು ಮಾ.31ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಅವರು ತನ್ನ ಮಿತ್ರರಿಗೆ, ಹಿತೈಷಿಗಳಿಗೆ, ಇಲಾಖಾ ಅಧಿಕಾರಿಗಳಿಗೆ ಹಾಗು ಪ್ರಮುಖರಿಗೆ ಭೋಜನ ಕೂಟವನ್ನು ಏರ್ಪಡಿಸಿದ್ದರು. ಈ ಸಂದದರ್ಭದಲ್ಲಿ
ಪ್ರಮುಖರು ಆಗಮಿಸಿ ಶುಭ ಹಾರೈಸಿದರು. ಡಾ. ರೇಣುಕಾ ಪ್ರಸಾದ್ ಕೆ.ವಿ. ಹಾಗೂ ಡಾ. ಜ್ಯೋತಿ ಆರ್ ಪ್ರಸಾದ್ ನೇತೃತ್ವದ ಆಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಕಮಿಟಿ “ಬಿ” ಇದರ ವತಿಯಿಂದ ಮುಖ್ಯಕಾರನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ.ಯವರು ಡಾ.ನಂದ ಕುಮಾರ್ ಬಾಳಿಕಳ ದಂಪತಿಯವರನ್ನು ಸನ್ಮಾನಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಧವ ಬಿ.ಟಿ. ಪ್ರಸನ್ನ ಕಲ್ಲಾಜೆ ಉಪಸ್ಥಿತರಿದ್ದರು. ಹಲವು ಮಂದಿ ಆಗಮಿಸಿ ನಂದಕುಮಾರ್ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.