ಮಂಗಳೂರು: ಜೂನ್ 3 ರಂದು ಕರ್ನಾಟಕ ವಿಧಾನಪರಿಷತ್ಗೆ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಉಸ್ತುವಾರಿಗಳನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ನೇಮಕ ಮಾಡಲಾಗಿದೆ. ಪುತ್ತೂರು ಬ್ಲಾಕ್ ಶಿಕ್ಷಕರ ಕ್ಷೇತ್ರ ಉಸ್ತುವಾರಿಯಾಗಿ
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪಗೌಡ, ಪುತ್ತೂರು ಬ್ಲಾಕ್ ಪದವೀಧರ ಕ್ಷೇತ್ರ ಉಸ್ತುವಾರಿಯಾಗಿ ಡಿಸಿಸಿ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ, ಉಪ್ಪಿನಂಗಡಿ ಬ್ಲಾಕ್ ಪದವೀಧರ ಕ್ಷೇತ್ರ ಉಸ್ತುವಾರಿ ಕೆಪಿಸಿಸಿ ಮೈನಾರಿಟಿ ಜನರಲ್ ಸೆಕ್ರೆಟರಿ ಮುಸ್ತಫ ಸುಳ್ಯ ಇವರನ್ನು ನೇಮಿಸಲಾಗಿದೆ.
ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸುಳ್ಯ ಬ್ಲಾಕ್ ಉಸ್ತುವಾರಿಯಾಗಿ ಪ್ರದೀಪ್ ಕುಮಾರ್ ರೈ ಪಾಂಬಾರು, ಕಡಬ ಬ್ಲಾಕ್ ಉಸ್ತುವಾರಿಯಾಗಿ ಶೈಲಜಾ ಅಮರನಾಥ್ ಗೌಡ, ಪದವೀಧರ ಕ್ಷೇತ್ರ ಚುನಾವಣೆಗೆ ಸುಳ್ಯ ಬ್ಲಾಕ್ ಉಸ್ತುವಾರಿಯಾಗಿ ಭಾಸ್ಕರ ಗೌಡ, ಕಡಬ ಬ್ಲಾಕ್ ಉಸ್ತುವಾರಿಯಾಗಿ ಮಹಮ್ಮದ್ ಆಲಿ ಪುತ್ತೂರು ನೇಮಕಗೊಂಡಿದ್ದಾರೆ ಎಂದು ಡಿಸಿಸಿ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ. ಉಸ್ತುವಾರಿಗಳು ಮುಂಬರುವ ಚುನಾವಣೆ ಯಲ್ಲಿ ತಮ್ಮನ್ನು ಸಂಪೂರ್ಣ ವಾಗಿ ತೊಡಗಿಸಿ ಕೊಂಡು ಪಕ್ಷದ ಅಭ್ಯರ್ಥಿಗಳಾದ ಡಾ ಮಂಜುನಾಥ್ ಮತ್ತು ಆಯಾನೂರು ಮಂಜುನಾಥ್ ರವರ ಗೆಲುವಿಗೆ ಶ್ರಮಿಸಬೇಕೆಂದು ತಿಳಿಸಲಾಗಿದೆ.