ಗ್ಲಾಸ್ಗೊ:ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಬಾಕ್ಸರ್ಗಳು 7 ಚಿನ್ನ ಪದಕ ಪಡೆದರು.ಮಹಿಳೆಯರ ವಿಭಾಗದಲ್ಲಿ ಸಾಕ್ಷಿ ಚೌಧರಿ (51ಕೆ.ಜಿ), ಪ್ರೀತಿ ಪವಾರ್ (54 ಕೆ.ಜಿ),ಜೈಸ್ಮಿನ್ ಲಂಬೋರಿಯಾ (57 ಕೆ.ಜಿ) ಪ್ರಿಯಾ ಗಂಘಾಸ್ (60 ಕೆ.ಜಿ) ಹಾಗೂ ಅರುಂಧತಿ ಚೌಧರಿ (70 ಕೆ.ಜಿ) ಅವರು ಚಿನ್ನದ ಪದಕ ಜಯಿಸಿದರು. ಪುರುಷರ ವಿಭಾಗದಲ್ಲಿ
ಸಚಿನ್ ಸಿವಾಚ್,ಅಂಕುಶ್ ಪಂಘಲ್ ಚಿನ್ನ ಗೆದ್ದರು.ಸಾಕ್ಷಿ ಅವರು
ಫೈನಲ್ನಲ್ಲಿ 5–0ಯಿಂದ ಇಂಗ್ಲೆಂಡ್ನ ರೂಬಿ ವೈಟ್ ವಿರುದ್ಧ ಜಯ ಸಾಧಿಸಿದರು. ಪ್ರೀತಿ ಪವಾರ್ ಅವರು 5–0ಯಿಂದ ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೊ ವಿರುದ್ಧ ಗೆದ್ದರು. ಹಾಲಿ ವಿಶ್ವ ಚಾಂಪಿಯನ್ ಜೈಸ್ಮಿನ್ ಅವರು ಉತ್ತರ ಐರ್ಲೆಂಡ್ನ ಮೈಕೆಲಾ ವಾಲ್ಶ್ ವಿರುದ್ಧ 5–0ಯಿಂದ ಜಯಭೇರಿ ಬಾರಿಸಿದರು.
ಪ್ರಸ್ತುತ ಭಾರತದ ಖಾತೆಯಲ್ಲಿ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಸೇರಿದಂತೆ ಒಟ್ಟು 39 ಪದಕಗಳೊಂದಿಗೆ ಭಾರತ ನಾಲ್ಕನೇ ಸ್ಥಾನದಲ್ಲಿದೆ.
ಡೆಕಾಥ್ಲಾನ್ನಲ್ಲಿ ತೇಜಸ್ವಿನ್ ಶಂಕರ್ ಕಂಚಿನ ಪದಕ, ಮಹಿಳೆಯರ 63 ಕೆ.ಜಿ ವಿಭಾಗದಲ್ಲಿ ಉನ್ನತಿ ಶರ್ಮಾ ಕಂಚಿನ ಪದಕ ಗಳಿಸಿದರು.ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಚಿತ್ರವೇಲ್ ಬೆಳ್ಳಿ ಮತ್ತು ಸೆಲ್ವ ಪ್ರಭು ತಿರುಮಾರನ್ ಕಂಚಿನ ಪದಕ ಗಳಿಸಿದರು. ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಸೋಮನ್ ರಾಣಾ ಮತ್ತು ಶುಭಂ ಜುಯಾಲ್ ಅವರು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು. ಪುರುಷರ ಶಾಟ್ಪ್ನಲ್ಲಿ ಎಫ್ 57 ವಿಭಾಗದಲ್ಲಿ ರಾಣಾ ಅವರು ಚಿನ್ನ ಗಳಿಸಿದರು. ಅವರು 13.40ಮೀ ದೂರ ಎಸೆತ ಸಾಧಿಸಿದರು. ಇದೇ ಸ್ಪರ್ಧೆಯಲ್ಲಿ ಶುಭಂ (13.28 ಮೀ) ಅವರು ಬೆಳ್ಳಿ ಪದಕ ಜಯಿಸಿದರು.












