ಸುಳ್ಯ:ಸುಳ್ಯ ತಾಲೂಕು ಕೃಷಿಕ ಸಮಾಜದ ತ್ರೈಮಾಸಿಕ ಸಭೆಯು ಕೃಷಿ ಇಲಾಖೆಯಲ್ಲಿ ನಡೆಯಿತು. ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಎಪಿಎಂಸಿ, ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿ ಇಲಾಖೆಯ ಮಾಹಿತಿ ನೀಡಿದರು.ಕೃಷಿಕ ಸಮಾಜದ
ಉಪಾಧ್ಯಕ್ಷ ಎ.ಎಸ್.ಕರುಣಾಕರ ಅಡ್ಪಂಗಾಯ, ಪ್ರಧಾನ ಕಾರ್ಯದರ್ಶಿ ಶ್ಯಾಮಪ್ರಸಾದ್.ಎ.ಎಸ್, ಜಿಲ್ಲಾ ಪ್ರತಿನಿಧಿ ಚಂದ್ರ ಕೋಲ್ಚಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ

ಕೆ.ಸುಧಾಕರ ಪ್ರಭು, ಹರಿಪ್ರಕಾಶ್.ಕೆ.ಎಸ್, ಎ.ಶರತ್ ಕುಮಾರ್, ಎ.ಎಸ್.ಮನ್ಮಥ ಅಡ್ಪಂಗಾಯ ಎ.ಉಮಾನಾಥ ಪಟೇಲ್ ಮನೆ, ನಾರಾಯಣ ಗೌಡ ಆಳಂಕಲ್ಯ, ರುಕ್ಮಯ್ಯ ಗೌಡ ಸೋಣಂಗೇರಿ, ಕುಮಾರಸ್ವಾಮಿ ಬಿಸಿಲುಮಲೆ, ಅಣ್ಣಾಜಿ ಗೌಡ ಪೈಲಾರು, ಕೆ.ಎಸ್.ಮಹೇಶ್ ಕುಮಾರ್ ಕರಿಕ್ಕಳ ಉಪಸ್ಥಿತರಿದ್ದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್ ಎಂ.ಎಸ್, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ತೋಟಗಾರಿಕಾ ಇಲಾಖೆಯ ಅಧಿಕಾರಿ ಅರಬಣ್ಣ ಪೂಜೇರಿ ಉಪಸ್ಥಿತರಿದ್ದು ಇಲಾಖಾ ಮಾಹಿತಿ ನೀಡಿದರು.







