ಸುಳ್ಯ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಶನ್ಗೆ ರಾಜ್ಯಪಾಲರು ಅನುಮತಿ ಹಿನ್ನೆಲೆಯಲ್ಲಿ ಅವರ ವಿರುದ್ಧ ತಕ್ಷಣ ಯಾವುದೇ ಕ್ರಮಕೈಗೊಳ್ಳದಂತೆ ವಿಚಾರಣಾ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್ ಇಂದು ಆದೇಶ ನೀಡಿರುವ ಹಿನ್ನಲೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಬಸ್ ನಿಲ್ದಾಣದ ಬಳಿಯಲ್ಲಿ
ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚಾರಣೆ ನಡೆಸಿದರು.
ಈ ಸಂಧರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್,ನ. ಪಂ ಸದಸ್ಯ ಎಂ ವೆಂಕಪ್ಪ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೊಲ್ಚಾರ್ ಮಾತನಾಡಿದರು.
ಬ್ಲಾಕ್ ಸಮಿತಿ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಪಕ್ಷದ ಮುಖಂಡರುಗಳಾದ ಸುರೇಶ್ ಅಮೈ, ಧರ್ಮಪಾಲ ಕೊಯಿಂಗಾಜೆ, ಕೆ.ಗೋಕುಲ್ ದಾಸ್, ಶಾಫಿ ಕುತ್ತಮಟ್ಟೆ,ಜಿ.ಕೆ.ಹಮೀದ್, ರಹೀಂ ಬೀಜದಕಟ್ಟೆ, ವಸಂತ ಪೆಲ್ತಡ್ಕ,ಬೋಜಪ್ಪ ನಾಯ್ಕ, ಶರೀಫ್ ಕಂಠಿ,ರಾಜು ಪಂಡಿತ್, ಅಶೋಕ್ ಚೂಂತಾರ್, ರಂಜಿತ್ ರೈ ಮೇನಾಲ,ರಾಧಾಕೃಷ್ಣ ಪರಿವಾರಕಾನ,ಸಲೀಮ್ ಪೆರಂಗೋಡಿ, ರಿಯಾಜ್ ಕಟ್ಟೆಕ್ಕಾರ್ಸ್, ಮುಜೀಬ್ ಪೈಚಾರ್, ಅಬ್ಬಾಸ್ ಎ ಬಿ, ಚಂದ್ರಶೇಖರ ಉಬರಡ್ಕ,
ಚಿತ್ರಕುಮಾರಿ ಪಾಲಡ್ಕ, ಗಣೇಶ ಪಾಲಡ್ಕ, ಸೌಕತ್ ಅಲಿ ಮೇನಾಲ,ಶಹೀದ್ ಪಾರೆ,ಸುರೇಶ್ ಕಾಮತ್, ನಂದರಾಜ್ ಸಂಕೇಶ್, ಶರೀಫ್ ರಿಲಾಕ್ಸ್ ಹಾಗೂ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.