ಪೇರಾಲು: ಸುಳ್ಯ ರೋಟರಿ ಕ್ಲಬ್ ವತಿಯಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಇಲ್ಲಿಯ ಮಕ್ಕಳಿಗೆ ಮತ್ತು ಪೋಷಕರಿಗೆ ಉಚಿತವಾಗಿ ತೆಂಗಿನ ಸಸಿಗಳನ್ನು ವಿತರಣೆಯನ್ನು ಮಾಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತಗೋಪಿನಾಥ್ ವಹಿಸಿದ್ದರು. ಸಸಿಗಳನ್ನು ಪ್ರಾಯೋಜಕರಾದ ಮಧುಸೂದನ ಕುಂಭಕ್ಕೋಡು ಅವರು 50 ತೆಂಗಿನ ಸಸಿಗಳನ್ನು
ಉಚಿತವಾಗಿ ನೀಡಿ ಶಾಲಾ ಮಕ್ಕಳನ್ನು ಪರಿಸರ ಕಾಳಜಿ ವಹಿಸುವಲ್ಲಿ ಪ್ರೋತ್ಸಾಹಿಸಿ ಹಾರೈಸಿದರು.ಸಸಿಗಳ ಪ್ರಯೋಜಕರಾದ ಲತಾ ಮಧುಸೂದನ್ ಸಸಿಗಳನ್ನು ನೀಡಿ ಮಕ್ಕಳಿಗೆ ಶುಭ ಹಾರೈಸಿದರು. ರೋಟರಿ ಕಾರ್ಯದರ್ಶಿ ಡಾ. ಹರ್ಷಿತ ಪುರುಷೋತ್ತಮ್ ವಂದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಆನಂದ ಖಂಡಿಗ , ಡಾ.ರಾಮ್ ಮೋಹನ್, ಸನತ್ ಪರಿಯಡ್ಕ ,ರಮಾ ವೈ. ಕೆ. ಚಂದ್ರ ಶೇಖರ್ ಪೇರಾಲು , ಸತೀಶ್ ಕೆ ಜಿ,ಮಧುರ ಜಗದೀಶ್ , ಶಾಲಾ ಮುಖ್ಯೋಪಾಧ್ಯಾಯಿನಿ ಶಿಲ್ಪಾ ,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮೋಹನ್ ದಾಸ್ ಕುಕ್ಕುಡೇಲು ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವಿದಾಸ್ ಕುಕ್ಕುಡೇಲು ಉಪಸ್ಥಿತರಿದ್ದರು.














