ಮಂಗಳೂರು: ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ 1,49,208 ಮತಗಳ ಲೀಡ್ ಪಡೆದಿದ್ದಾರೆ. ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಇವಿಎಂ ನಲ್ಲಿ 7,64,132 ಮತ ಹಾಗೂ
4002 ಅಂಚೆ ಮತ ಸೇರಿ ಒಟ್ಟು 7,64,132 ಮತ ಪಡೆದರೆ, ಪದ್ಮರಾಜ್ ಆರ್ ಪೂಜಾರಿ 6,12,103 ಇವಿಎಂ ಮತಗಳು ಹಾಗೂ 2821 ಅಂಚೆ ಮತ ಸೇರಿ 6,14,924 ಮತ ಪಡೆದಿದ್ದಾರೆ. ಸುಳ್ಯ ವಿಧಾನಾಭಾ ಕ್ಷೇತ್ರದಿಂದ ಬಿಜೆಪಿ 39,147 ಮತಗಳ ಬಹುಮತ ಪಡೆದಿದೆ. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 1,02,762 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ 63,615 ಮತ ಪಡೆದಿದ್ದಾರೆ.