ಕರಾಚಿ:ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಚಾಂಪಿಯನ್ಸ್ ಟ್ರೋಫಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ನ್ಯೂಜಿಲ್ಯಾಂಡ್ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ಗಳಲ್ಲಿ 5 ವಿಕೆಟ್ಗೆ 320 ರನ್ ಗಳಿಸಿತು. ನ್ಯೂಜಿಲ್ಯಾಂಡ್ ನೀಡಿದ 321 ರನ್ ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 47.2 ಓವರ್ಗಳಲ್ಲಿ
260 ರನ್ ಗೆ ಆಲೌಟ್ ಆಗಿ 60 ರನ್ ಗಳಿಂದ ಸೋಲು ಕಂಡಿದೆ. ಪಾಕ್ಗೆ ಆರಂಭದಲ್ಲೇ ಆಘಾತ ಎದುರಾಯಿತು. 6 ರನ್ ಗಳಿಸಿದ್ದ ಸೌದ್ ಶಕೀಲ್ ಮತ್ತು 3 ರನ್ ಗಳಿಸಿದ್ದ ಮೊಹಮ್ಮದ್ ರಿಜ್ವಾನ್ ಒ’ರೂರ್ಕ್ ಎಸೆತದಲ್ಲಿ ಓಟಾಗಿ ಪೆವಿಲಿಯನ್ ಸೇರಿದರು. ನಂತರ ಫಖರ್ ಜಮಾನ್ 24 ರನ್ ಗಳಿಸಿ ಔಟಾದರೆ, ಸಲ್ಮಾನ್ ಆಘ್ ಸ್ಫೋಟಕ ಬ್ಯಾಟಿಂಗ್ ಮಾಡಿ 28 ಎಸೆತಗಳಲ್ಲಿ 42 ರನ್ ಸಿಡಿಸಿ ಔಟಾದರು. ಬಾಬರ್ ಅಜಂ ತಾಳ್ಮೆಯ ಆಟವಾಡಿದರೂ ಸಹ ಬ್ಯಾಟರ್ ಗಳು ಸಪೋರ್ಟ್ ಮಾಡಲಿಲ್ಲ. ಬಾಬರ್ 90 ಎಸೆತಗಳಲ್ಲಿ 64 ರನ್ ಮಾಡಿದರು. ಕುಷ್ದಿಲ್ ಷಾ 49 ಎಸೆತಗಳಲ್ಲಿ 69 ರನ್ ಸಿಡಿಸಿದರು.
ನ್ಯೂಜಿಲೆಂಡ್ನ ಆರಂಭಿಕ ಆಟಗಾರರಾದ ವಿಲ್ ಯಂಗ್ ಮತ್ತು ಟಾಮ್ ಲ್ಯಾಥಮ್ ಶತಕಗಳನ್ನು ಗಳಿಸಿ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ನೆರವಾದರು. ವಿಲ್ ಯಂಗ್ 107 ಮತ್ತು ಟಾಮ್ ಲ್ಯಾಥಮ್ ಅಜೇಯ 118 ರನ್ ಗಳಿಸಿದರು. ಗ್ಲೆನ್ ಫಿಲಿಪ್ಸ್ 39 ಎಸೆತಗಳಲ್ಲಿ 61 ರನ್ ಗಳಿಸಿದರು. ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ತಲಾ 2 ವಿಕೆಟ್ ಪಡೆದರು. ಅಬ್ರಾರ್ ಅಹ್ಮದ್ 1 ವಿಕೆಟ್ ಪಡೆದರು.29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಮೆಂಟ್ ನಡೆಯುತ್ತಿದೆ.