ಮಂಡ್ಯ:ಮಂಡ್ಯ ನಗರದ ಪ್ರತಿಷ್ಠಿತ ಭರತನಾಟ್ಯ ಸಂಸ್ಥೆಯಾದ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ನಲ್ಲಿ ಭರತನಾಟ್ಯ ಕಾರ್ಯಾಗಾರ ಫೆ. 22 ಹಾಗೂ 23 ಶನಿವಾರ ಹಾಗೂ ಭಾನುವಾರ ನಡೆಯಲಿದೆ. ಚೆನ್ನೈನ ಖ್ಯಾತ ಹಿರಿಯ ಗುರುಗಳಾದ ಡಾ.ರೇವತಿ ರಾಮಚಂದ್ರನ್ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದೆ. ಮೇಲತ್ತೂರು ಶೈಲಿಯ ವಿದ್ವಾಂಸರಾದ ಇವರು ಭರತನಾಟ್ಯದ ಮೇಲತ್ತೂರು ಶೈಲಿಯ
ವೈಶಿಷ್ಟ್ಯಗಳನ್ನು ತಿಳಿಸಿಕೊಡುತ್ತಾ ಇದೇ ಶೈಲಿಯಲ್ಲಿ ಸಂಯೋಜಿತವಾದ ಕೃತಿ ಒಂದನ್ನು ಹೇಳಿಕೊಡುತ್ತಿದ್ದಾರೆ .ಭರತನಾಟ್ಯದ ಕಲಿಕೆಯಲ್ಲಿ ಸೀನಿಯರ್ ಹಾಗೂ ವಿದ್ವತ್ ಹಂತದಲ್ಲಿರುವ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ನಡೆಸಿಕೊಡುತ್ತಿರುವ ಕಾರ್ಯಾಗಾರದಲ್ಲಿ ಮಂಡ್ಯ ಮೈಸೂರು ಬೆಂಗಳೂರು ಹಾಸನ ಶಿವಮೊಗ್ಗ ಇತ್ಯಾದಿ ಊರುಗಳಿಂದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.ಗುರು ಡಾ.ರೇವತಿ ರಾಮಚಂದ್ರನ್ ಚೆನ್ನೈನ ಪ್ರತಿಷ್ಠಿತ ಸಂಸ್ಥೆ ಕಲಾ ಕ್ಷೇತ್ರ ಫೌಂಡೇಶನ್,ಅಡ್ಯಾರ್ ಇದರ ನಿರ್ದೇಶಕರಾಗಿರುತ್ತಾರೆ ಎಂದು ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಮಂಡ್ಯ ಇದರ ಕಲಾ ನಿರ್ದೇಶಕರಾದ ಡಾ.ಚೇತನರಾಧಾಕೃಷ್ಣ ಪಿ ಎಂ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಎಂ.ರಾಧಾಕೃಷ್ಣ ತಿಳಿಸಿದ್ದಾರೆ.