ಕಲ್ಲಪಳ್ಳಿ: ಗಡಿಪ್ರದೇಶವಾದ ಕಲ್ಲಪಳ್ಳಿಯ ಕೆಲ ಭಾಗದಲ್ಲಿ ಚಿರತೆ ಇರುವ ಆತಂಕ ಉಂಟಾಗಿದೆ. ನಿನ್ನೆ ರಾತ್ರಿ ಕಲ್ಲಪಳ್ಳಿ ಬೀರುದಂಡಿನ ಭರತ ಎಂಬವರ ಮನೆಯಿಂದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಸ್ಥಳದಲ್ಲಿ ಅರಣ್ಯ ಇಲಾಖೆಯು
ಕ್ಯಾಮರಾ ಅಳವಡಿಸಿದೆ. ರಾತ್ರಿ ಸುಮಾರು 8 ಗಂಟೆಯ ವೇಳಗೆ ನಾಯಿಗಳ ಕಿರುಚಾಟ ಕೇಳಿ ಮನೆ ಮಂದಿ ಹೊರ ಬಂದು ನೋಡಿದಾಗ ಒಂದು ನಾಯಿ ನಾಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಇಂದು ಸ್ಥಳದಲ್ಲಿ ಪರಿಶೀಲನೆ ನಡೆಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಿರತೆಯ ಚಲನ ವಲನಗಳನ್ನಕ್ಯಾಮರಾ ಅಳವಡಿಸಿದ್ದಾರೆ. ಸ್ಥಳದಲ್ಲಿ ಚಿರತೆಯದ್ದು ಎಂದು ಶಂಕಿಸಲಾಗಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದೆ.