ಹರಾರೆ:ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಭಾರತ ಜಿಂಬಾಬ್ಬೆ ವಿರುದ್ಧದ ಟಿ20 ಸರಣಿ ಗೆದ್ದಿದೆ.ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 219 ರನ್ ಸಿಡಿಸಿತ್ತು. ಬೃಹತ್ ಮೊತ್ತ ಚೇಸ್ ಮಾಡಿದ ಜಿಂಬಾಬ್ವೆ ಜಿಂಬಾಬ್ವೆ 17.5 ಓವರ್ಗಳಲ್ಲಿ 129 ರನ್ಗೆ ಆಲೌಟ್ ಆಯಿತು. ಈ ಮೂಲಕ
ಟೀಂ ಇಂಡಿಯಾ 90 ರನ್ ಗೆಲುವು ದಾಖಲಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದುಕೊಂಡಿದೆ. ಬ್ರಿಯಾನ್ ಬೆನ್ನೆಟ್ ಹೊರತುಪಡಿಸಿದರೆ ಜಿಂಬಾಬ್ಬೆ ಪರ ಹೋರಾಟ ಯಾರಿಂದಲೂ ಬರಲಿಲ್ಲ. ಆರಂಭಿಕ ಬ್ರಿಯಾನ್ 32 ರನ್ ಕಾಣಿಕೆ ನೀಡಿದ್ದರು. ಪ್ರಿನ್ಸ್ ಯಾದವ್, ಯಶ್ ಠಾಕೂರ್, ರವಿ ಬಿಶ್ನೋಯ್, ಶಿವಂ ದುಬೆ, ತಿಲಕ್ ವರ್ಮಾ, ಅಭಿಷೇಕ್ ಶರ್ಮಾ ವಿಕೆಟ್ ಕಬಳಿಸಿದರು.
ಇದಕ್ಕಿಂತ ಮುನ್ನ ಟೀಂ ಇಂಡಿಯಾ ಪರ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 44 ಎಸೆದಲ್ಲಿ ಇಶಾನ್ ಕಿಶನ್ 81 ರನ್ ಸಿಡಿಸಿ ಮಿಂಚಿದ್ದರು. 9 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ ಇಶಾನ್ ಅಬ್ಬರಿಸಿದರು. ತಿಲಕ್ ವರ್ಮ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 60 ರನ್ ಸಿಡಿಸಿದ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ ನೆರವಾಯಿತು.ಸೂರ್ಯವಂಶಿ 20 ರನ್, ನಾಯಕ ಶ್ರೇಯಸ್ ಅಯ್ಯರ್ 25 ರನ್ ಸಿಡಿಸಿದರು.








