ಮೈಸೂರು:ಈ ಬಾರಿ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಬಹಳ ಅಭೂತಪೂರ್ವ ಗೆಲುವನ್ನು ತಂದು ಕೊಟ್ಟಿದ್ದಾರೆ. ಹಾಗಾಗಿ ಈ ಗೆಲುವನ್ನು ಶಿಕ್ಷಕ ಸಮುದಾಯಕ್ಕೆ ಸರ್ಮಪಿಸುತ್ತೇನೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಎಸ್.ಎಲ್.ಭೋಜೇ ಗೌಡ ಹೇಳಿದ್ದಾರೆ.ನಮ್ಮ ಶಿಕ್ಷಕರು ಬಹಳ ಶ್ರಮಪಟ್ಟು
ಗೆಲುವನ್ನು ತಂದುಕೊಟ್ಟಿದ್ದಾರೆ.ಬಹಳ ವಿಶ್ವಾಸವಿಟ್ಟು ಮೊದಲ ಪ್ರಾಶಸ್ತ್ಯ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ.ಹಾಗಾಗಿ ನನ್ನ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ.ಈ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿತ್ತು, ಅದರಂತೆಯೇ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಒಂದಾಗಿದ್ದರಿಂದ ನಮ್ಮ ಬಲ ಹೆಚ್ಚಾಗಿದೆ. ಕಳೆದ ಬಾರಿಯೇ ನಾನು ಜೆಡಿಎಸ್ ನಿಂದ ಏಕಾಂಗಿಯಾಗಿ ನಿಂತು ಗೆದ್ದಿದ್ದೆ.
ಈ ಬಾರಿ ಬಿಜೆಪಿ ಜೊತೆಗಿನ ಹೊಂದಾಣಿಕೆಯಿಂದ ಬಲ ಇನ್ನಷ್ಟು ಹೆಚ್ಚಿದೆ.ಬಿಜೆಪಿ ಜೆಡಿಎಸ್ ಮೈತ್ರಿ ಫಲಪ್ರದವಾಗಿದೆ.
ಬಿಜೆಪಿ ಜೆಡಿಎಸ್ ನ ಎಲ್ಲಾ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜಯಗಳಿಸಿದ ಬಳಿಕ ಜೆಡಿಎಸ್ ನ ಎಸ್ ಎಲ್ ಭೋಜೇಗೌಡ ಹೇಳಿದರು.