ಸುಳ್ಯ: ರಾಜ್ಯ ಸರಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ, ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಮಾತಾನಡಿದ ಐವನ್ ಡಿಸೋಜ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಳಿಕ
ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿದರು.ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಯುವ ಮೋರ್ಚಾ ಮಂಡಲ ಸಮಿತಿ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷ ಪ್ರತಿಭಟನೆಯನ್ನು ಉದ್ದೇಶಿಸಿ
ಮಾತನಾಡಿದರು.
ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಉಪಾಧ್ಯಕ್ಷರಾದ ಆರ್.ಕೆ.ಭಟ್ ಕುರುಂಬಡೇಲು,ಶಿವಾನಂದ ಕುಕ್ಕುಂಬಳ, ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಎ.ವಿ, ಬಿಜೆಪಿ ನಗರಾಧ್ಯಕ್ಷ ಎ.ಟಿ.ಕುಸುಮಾಧರ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್, ಪ್ರಮುಖರಾದ ಮನುದೇವ ಪರಮಲೆ, ಆಶಾ ತಿಮ್ಮಪ್ಪ, ಗುಣವತಿ ಕೊಲ್ಲಂತ್ತಡ್ಕ, ತೇಜಸ್ವಿನಿ ಕಟ್ಟಪುಣಿ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಟ್, ಬುದ್ಧ ನಾಯ್ಕ್, ಸುಧಾಕರ ಕುರುಂಜಿಭಾಗ್, ದಾಮೋದರ ಮಂಚಿ, ಶಂಕರ ಪೆರಾಜೆ, ಶಿವನಾಥ್ ರಾವ್, ಹೇಮಂತ ಕಂದಡ್ಕ, ನಾರಾಯಣ ಶಾಂತಿನಗರ, ರಾಧಾಕೃಷ್ಣ ರೈ ಬೂಡು, ಸರೋಜಿನಿ ಪೆಲ್ತಡ್ಕ, ರಾಜೇಶ್ ರೈ ಮೇನಾಲ, ಅಶೋಕ್ ಅಡ್ಕಾರ್, ದಿನೇಶ್ ದುಗಲಡ್ಕ, ಅಜಿತ್ ಐವರ್ನಾಡು, ರಾಜೇಶ್ ಕಿರಿಭಾಗ, ಜಗದೀಶ್ ಸರಳಿಕುಂಜ, ಸತೀಶ್ ನಾಯ್ಕ್, ಶಿವರಾಮ ಕೇರ್ಪಳ, ಜಗನ್ನಾಥ ಜಯನಗರ, ನಾರಾಯಣ ಶಾಂತಿನಗರ, ಶೀನಪ್ಪ ಬಯಂಬು, ಸುಶೀಲಾ ಜಿನ್ನಪ್ಪ, ಚಿದಾನಂದ ಕುದ್ಪಾಜೆ, ಜಯರಾಜ ಕುಕ್ಕೇಟ್ಟಿ, ಕಿಶನ್ ಜಬಳೆ, ಲತೀಶ್ ಗುಂಡ್ಯ, ಅವಿನಾಶ್ ಕುರುಂಜಿ, ನವೀನ್ ಎಲಿಮಲೆ, ಸುದರ್ಶನ ಪಾತಿಕಲ್ಲು, ಕಿರಣ್ ಕುರುಂಜಿ, ನಾರಾಯಣ ಶಾಂತಿನಗರ, ಅನೂಪ್ ಬಿಳಿಮಲೆ, ಪ್ರಸಾದ್ ಕಾಟೂರು ಮತ್ತಿತರರು ಭಾಗವಹಿಸಿದ್ದರು.