ಸುಳ್ಯ:ಸುಳ್ಯದ ಅಂಬೆಟಡ್ಕದಲ್ಲಿರುವ ಅಟಲ್ ಜಿ ಚಾರಿಟೆಬಲ್ ಟ್ರಸ್ಟ್ ಕಟ್ಟಡದಲ್ಲಿ ಭಾರತಿಯ ಜನತಾ ಪಾರ್ಟಿ ಸುಳ್ಯ ಮಂಡಲದ ನೂತನ ಕಛೇರಿಯು ಶ್ರೀ ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು. ಶ್ರೀಹರಿ ಕಾಂಪ್ಲೆಕ್ಸ್ನಲ್ಲಿರುವ ಬಿಜೆಪಿ ಕಚೇರಿ ಸದ್ಯದಲ್ಲಿಯೇ ಅಂಬೆಟಡ್ಕಕ್ಕೆ ಸ್ಥಳಾಂತರಗೊಳ್ಳಲಿದೆ.ನಟರಾಜ ಶರ್ಮ ನೇತೃತ್ವದಲ್ಲಿ
ಗಣಪತಿ ಹವನ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮುಖಂಡರದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ಹರೀಶ್ ಕಂಜಿಪಿಲಿ, ರಾಕೇಶ್ ರೈ ಕೆಡೆಂಜಿ, ಸುಬೋಧ್ ಶೆಟ್ಟಿ ಮೇನಾಲ, ವೆಂಕಟ್ ದಂಬೆಕೋಡಿ, ಸುಧಾಕರ ಕಾಮತ್, ಪಿ.ಕೆ.ಉಮೇಶ್,ಕೃಷ್ಣ ಶೆಟ್ಟಿ ಕಡಬ, ವಿನಯಕುಮಾರ್ ಕಂದಡ್ಕ, ಮುಳಿಯ ಕೇಶವ ಭಟ್, ಆಶಾ ತಿಮ್ಮಪ್ಪ, ಮಧುಸೂಧನ ಕುಂಭಕ್ಕೋಡು, ಲತಾ ಮಧುಸೂಧನ, ಚನಿಯ ಕಲ್ತಡ್ಕ, ಎ.ಟಿ.ಕುಸುಮಾಧರ, ಡಾ. ಮನೋಜ್ ಅಡ್ಡಂತ್ತಡ್ಕ, ಜಯರಾಮ ರೈ ಜಾಲ್ಸೂರು, ವಿನಯಕುಮಾರ್ ಮುಳುಗಾಡು, ವಿಕ್ರಂ ಅಡ್ಪಂಗಾಯ, ಸುನಿಲ್ ಕೇರ್ಪಳ, ಚಂದ್ರಶೇಖರ ನೆಡಿಲು, ಪ್ರಸಾದ್ ಕಾಟೂರು, ಶೀಲಾ ಅರುಣ ಕುರುಂಜಿ, ಬಾಲಕೃಷ್ಣ ಬಾಣಜಾಲು, ಪ್ರದೀಪ್ ರೈ ಮನವಳಿಕೆ, ಜಗದೀಶ್ ಸರಳಿಕುಂಜ, ಅಶೋಕ್ ಅಡ್ಕಾರ್, ಶ್ರೀಪತಿ ಭಟ್, ಕರುಣಾಕರ ಹಾಸ್ಪಾರೆ, ಸೋಮನಾಥ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.