ನವದೆಹಲಿ: ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಸೋಮವಾರ ಪ್ರಕಟಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನಾ) ಬಿ.ಎಲ್. ಸಂತೋಷ್ ಅವರು ಮುಂದುವರೆದಿದ್ದಾರೆ. ಕರ್ನಾಟಕದ ಪ್ರೊ. ಎಂ. ನಾಗರಾಜ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಹುದ್ದೆಯ ಜವಾಬ್ದಾರಿ ನೀಡಲಾಗಿದೆ. ಕೇರಳ ಘಟಕದ
ಮಾಜಿ ಅಧ್ಯಕ್ಷ ಕೆ.ಸುರೇಂದ್ರನ್ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ.
ರಾಷ್ಟ್ರೀಯ ಉಪಾಧ್ಯಕ್ಷರು: ವಸುಂಧರಾ ರಾಜೇ (ರಾಜಸ್ಥಾನ), ತೀರಥ್ ಸಿಂಗ್ ರಾವತ್ (ಉತ್ತರಾಖಂಡ), ರಾಮ್ ಮಾಧವ್ (ದೆಹಲಿ), ಬೈಜಯಂತ್ ಜಯ್ ಪಂಡಾ (ಒಡಿಶಾ), ಡಿ. ಪುರಂದೇಶ್ವರಿ (ಆಂಧ್ರಪ್ರದೇಶ), ರೇಖಾ ವರ್ಮಾ (ಉತ್ತರ ಪ್ರದೇಶ), ವರ್ಷಾಬೆನ್ ನರೇಂದ್ರಭಾಯಿ ದೋಶಿ (ಗುಜರಾತ್), ಡಾ. ಭಾರತಿ ಪ್ರವೀಣ್ ಪವಾರ್ (ಮಹಾರಾಷ್ಟ್ರ), ಸರ್ದಾರ್ ಮನಪ್ರೀತ್ ಸಿಂಗ್ ಬಾದಲ್ (ಪಂಜಾಬ್), ಲಾಲ್ ಸಿಂಗ್ ಆರ್ಯ (ಮಧ್ಯಪ್ರದೇಶ), ಪ್ರೊ. ಎಂ. ನಾಗರಾಜ (ಕರ್ನಾಟಕ), ಪ್ರೊ. ತಾರಿಖ್ ಮನ್ಸೂರ್ (ಉತ್ತರ ಪ್ರದೇಶ) ಹಾಗೂ ಡಾ. ಮಧುಚಂದ್ರಾ ಕರ್ (ಪಶ್ಚಿಮ ಬಂಗಾಳ) ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳು: ವಿನೋದ್ ತಾವ್ಡೆ, ಸುನಿಲ್ ಬನ್ಸಲ್, ಬಿಪ್ಲಬ್ ಕುಮಾರ್ ದೇವ್, ಸ್ಮೃತಿ ಇರಾನಿ, ಡಾ. ಸತೀಶ್ ಪೂನಿಯಾ, ಗಜೇಂದ್ರ ಪಟೇಲ್, ಹರೀಶ್ ದ್ವಿವೇದಿ ಮತ್ತು ಸಂಜಯ್ ಭಾಟಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಕೆ.ಸುರೇಂದ್ರನ್, ಅನಿಲ್ ಆಂಟೋನಿ, ರೋಹನ್ ಗುಪ್ತಾ ಸೇರಿದಂತೆ 16 ಜನರಿಗೆ ಜವಾಬ್ದಾರಿ ನೀಡಲಾಗಿದೆ.
ರಾಷ್ಟ್ರೀಯ ಖಜಾಂಚಿ: ಪಿಯೂಷ್ ಗೋಯಲ್,ರಾಷ್ಟ್ರೀಯ ಸಹ ಖಜಾಂಚಿ: ರಾಜೇಶ್ ಮಂಗಲ್,ಕೇಂದ್ರ ಕಚೇರಿ ಉಸ್ತುವಾರಿ: ತರುಣ್ ಚುಗ್,ಮಾಧ್ಯಮ ಸಂಚಾಲಕ: ಅನಿಲ್ ಬಲೂನಿ,ಸಾಮಾಜಿಕ ಜಾಲತಾಣ ಸಂಚಾಲಕ: ದೀಪಕ್ ಮ್ಹಾಸ್ಕಿ.
ವಿವಿಧ ಮೋರ್ಚಾಗಳ ಅಧ್ಯಕ್ಷರಾಗಿ
ಯುವ ಮೋರ್ಚಾ: ಡಾ. ಹೇಮಂಗ್ ಜೋಶಿ
ಮಹಿಳಾ ಮೋರ್ಚಾ: ರೂಪ್ ಕುಮಾರಿ ಚೌಧರಿ
ಒಬಿಸಿ ಮೋರ್ಚಾ: ಅಮರ್ಪಾಲ್ ಮೌರ್ಯ
ಕಿಸಾನ್ ಮೋರ್ಚಾ: ಬನ್ಸಿಲಾಲ್ ಗುರ್ಜರ್
ಎಸ್ಸಿ ಮೋರ್ಚಾ: ಶಿವೇಶ್ ಕುಮಾರ್ ರಾಮ್
ಎಸ್ಟಿ ಮೋರ್ಚಾ: ಡಾ. ಮನ್ನಾಲಾಲ್ ರಾವತ್
ಅಲ್ಪಸಂಖ್ಯಾತ ಮೋರ್ಚಾ: ಕುನ್ವರ್ ಬಾಸಿತ್ ಅಲಿ








































