ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಸೇವಾ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿರಥ ಸುಳ್ಯದಿಂದ ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ಬುಧವಾರ ಬೆಳಿಗ್ಗೆ ಪ್ರಯಾಣ ಆರಂಭಿಸಿತು. ರಥ ಪ್ರಯಾಣ ಮೆರವಣಿಗೆಗೆ ಕೆವಿಜಿ ವೃತ್ತದ ಬಳಿ ಸಂಭ್ರಮದ
ಚಾಲನೆ ನೀಡಲಾಯಿತು.ಮಂಗಳವಾರ ಬೆಳಿಗ್ಗೆ ಕೋಟೇಶ್ವರದಿಂದ ಆರಂಭಗೊಂಡ ರಥಯಾತ್ರೆ ರಾತ್ರಿ ಸುಳ್ಯಕ್ಕೆ ಆಗಮಿಸಿ ಕಾಂತಮಂಗಲ ಶ್ರೀ ಕ್ಷೇತ್ರ ಗುತ್ಯಮ್ಮನ ಸನ್ನಿಧಿಯಲ್ಲಿ ತಂಗಿತು. ಬುಧವಾರ ಮುಂಜಾನೆ ಗುತ್ಯಮ್ಮ ದೇಗುಲದ ಬಳಿಯಿಂದ ಕೆವಿಜಿ ವೃತ್ತಕ್ಕೆ ಆಗಮಿಸಿ ಕುಕ್ಕೆಗೆ ಹೊರಟ ರಥಯಾತ್ರೆ ಮೆರವಣಿಗೆಗೆ ಸುಳ್ಯ ಕೆವಿಜಿ ವೃತ್ತದ ಬಳಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕೇಸರಿ ಧ್ವಜ ಹಾರಿಸುವುದರ ಮೂಲಕ ಚಾಲನೆ ನೀಡಿದರು.

ಚಂಡೆ ವಾದ್ಯ ಮೇಳಗಳು, ಬಣ್ಣದ ಕೊಡೆಗಳು, ಕುಣಿತ ಭಜನಾ ತಂಡ, ಗೊಂಬೆ, ಯಕ್ಷಗಾನ ವೇಷಗಳು, ವೈವಿಧ್ಯಮಯ ಜಾನಪದ ನೃತ್ಯ ಕಲಾ ತಂಡಗಳು, ಪೂರ್ಣ ಕುಂಬ ಹಿಡಿದ ಮಹಿಳೆಯರು ಮೆರವಣಿಗೆಗೆ ಸಾಥ್ ನೀಡಿದವು.
ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ಜ್ಯೋತಿ ಆರ್.ಪ್ರಸಾದ್, ಡಾ.ಅಭಿಜ್ಞಾ, ಮೌರ್ಯ ಆರ್.ಕುರುಂಜಿ, ಪ್ರಮುಖರಾದ ನಿತ್ಯಾನಂದ ಮುಂಡೋಡಿ, ಎನ್.ಎ.ರಾಮಚಂದ್ರ,ಭರತ್ ಮುಂಡೋಡಿ, ಎಸ್.ಎನ್ ಮನ್ಮಥ, ಪಿ.ಸಿ.ಜಯರಾಮ, ಹರೀಶ್ ಕಂಜಿಪಿಲಿ,ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಚಂದ್ರ ಕೋಲ್ಚಾರ್, ಡಾ.ಲೀಲಾಧರ ಡಿ.ವಿ,
ಭವಾನಿಶಂಕರ ಅಡ್ತಲೆ,ಮಾಧವ ಬಿ.ಟಿ. ದಿನೇಶ್ ಮಡ್ತಿಲ, ಪ್ರಸನ್ನ ಕಲ್ಲಾಜೆ ಕಮಲಾಕ್ಷ ನಂಗಾರು , ಡಾ.ಮನೋಜ್ , ಸಂತೋಷ್ ಕುತ್ತಮೊಟ್ಟೆ, ಮೋಹನ್ ರಾಮ್ ಸುಳ್ಳಿ, ಶಾಫಿ ಕುತ್ತಮೊಟ್ಟೆ , ರಾಜು ಪಂಡಿತ್ ,ಸುಪ್ರೀತ್ ಮೊಂಟಡ್ಕ, ಎಂ ವೆಂಕಪ್ಪ ಗೌಡ
ಕೆವಿಜಿ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಸಿಬ್ಬಂದಿಗಳು ಸೇರಿ ಸಾವಿರಾರು ಮಂದಿ ಉಪಸ್ಥಿತರಿದ್ದರು.
ವಿವಿಧ ಕಡೆಗಳಲ್ಲಿ ಸ್ವಾಗತವನ್ನು ಸ್ವೀಕರಿಸಿ ಇಂದು ಸಂಜೆ ಸುಬ್ರಹ್ಮಣ್ಯ ತಲುಪಲಿದೆ.ಬೆಳ್ಳಿರಥವನ್ನು ನ.10ರಂದು ಶಾಸ್ತ್ರೋಕ್ತವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ.















