ಕೋಲ್ಕತ್ತಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 45.1 ಓವರ್ಗಳಲ್ಲಿ 204 ರನ್ ಗೆ ಆಲೌಟ್ ಆದ ಬಾಂಗ್ಲಾದೇಶ, ಪಾಕ್ ಗೆಲುವಿಗೆ 205 ರನ್ ಗಳ ಸಾಧಾರಣ ಗುರಿ ನೀಡಿದೆ. ಟಾಸ್ ಗೆದ್ದ ಬಾಂಗ್ಲದೇಶ
ಬ್ಯಾಟಿಂಗ್ ಆಯ್ದುಕೊಂಡಿತು. ಓಪನರ್ ತಂಝೀದ್ ಹಸನ್ ಮೊದಲ ಓವರ್ ನಲ್ಲಿಯೇ ಔಟ್ ಆದರೆ , ನಜ್ಮುಲ್ ಹುಸೈನ್ ಶಾಂಟೊ, ಮುಶ್ಪಿಕುರ್ ರಹೀಮ್ ತಲಾ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಲಿಟನ್ ದಾಸ್ 45, ಮುಹಮ್ಮದುಲ್ಲಾ 56 ರನ್, ನಾಯಕ ಶಾಕಿಬ್ ಉಲ್ ಹಸನ್ 43 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ತೌಹೀದ್ ಹೃದೋಯ್ 7 ,ಮೆಹಿದಿ ಹಸನ್ 25 ,ತಸ್ಕಿನ್ ಅಹ್ಮದ್ 6 ರನ್ ಗಳಿಸಿದರು.
ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ, ಮುಹಮ್ಮದ್ ವಾಸಿಮ್ ತಲಾ 3 ವಿಕೆಟ್ ಪಡೆದು ಬಾಂಗ್ಲಾವನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರೆ, ಹಾರೀಸ್ ರವೂಫ್ 2 ವಿಕೆಟ್ ಹಾಗೂ ಇಫ್ತಿಕಾರ್ ಅಹ್ಮದ್, ಉಸಾಮ ಮಿರ್ ತಲಾ ಒಂದು ವಿಕೆಟ್ ಪಡೆದುಕೊಂಡರು.
















