ಬಂದಡ್ಕ: ಬಂದಡ್ಕ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ
ವಾರ್ಷಿಕ ಜಾತ್ರೋತ್ಸವ ಫೆ.5ರಿಂದ ಆರಂಭಗೊಂಡಿದ್ದು 9ರ ತನಕ ಬ್ರಹ್ಮಶ್ರೀ ಇರಿವಲ್ ಕೇಶವ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿದೆ. ವಿವಿಧ ವೈದಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.7ರಂದು ವಿವಿಧ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗೆ
ಗಣಪತಿಹೋಮ, ಉಷಃಪೂಜೆ, ತುಲಾಭಾರ ಸೇವೆ, ಶ್ರೀ ಭೂತಬಲಿ,ಕಲಶಾಭಿಷೇಕ ವಿಷ್ಣು ಸಹಸ್ರನಾಮ ಪೂಜೆ, ಭಜನೆ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಸಂಜೆ ದೀಪಾರಾಧನೆ, ತಾಯಂಬಕ ರಿಂದ ನೃತ್ಯ ವೈವಿಧ್ಯ,ಧಾರ್ಮಿಕ ಉಪನ್ಯಾಸ,ನೃತ್ಯ ವೈವಿಧ್ಯ, ರಾತ್ರಿಪೂಜೆ, ಶ್ರೀ ಭೂತಬಲಿ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು. ನಾಳೆ ಫೆ.8ರಂದು ಪೂ.ಗಂಟೆ 7ಕ್ಕೆ ಗಣಪತಿಹೋಮ, ಉಷಃ ಪೂಜೆ, ಬೆಳಿಗ್ಗೆ 8 ರಿಂದ

ತುಲಾಭಾರ ಸೇವೆ, 9ಕ್ಕೆ ಶ್ರೀ ಭೂತಬಲಿ, ಕಲಶಾಭಿಷೇಕ
11.30ರಿಂದ ಭಜನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 6ಕ್ಕೆ ದೀಪಾರಾಧನೆ, 6.15ಕ್ಕೆ ತಾಯಂಬಕ,6.30ರಿಂದ ಭಜನೆ,ನೃತ್ಯಭಜನೆ,ತಿರುವಾದಿರ,ಭಕ್ತಿ ಗೀತೆ, ಧಾರ್ಮಿಕ ಉಪನ್ಯಾಸ,ನೃತ್ಯವೈವಿಧ್ಯ, 7.30ಕ್ಕೆ ರಾತ್ರಿ ಪೂಜೆ
8ಕ್ಕೆ ಶ್ರೀ ಭೂತಬಲಿ ರಾತ್ರಿ 11ಕ್ಕೆ ಕಟ್ಟೆ ಪೂಜೆ. ಸಿಡಿಮದ್ದು ಸೇವೆ,
ನೃತ್ಯೋತ್ಸವ, ದರ್ಶನಬಲಿ, ಶಯನ ನಡೆಯಲಿದೆ.
