ಚೊಕ್ಕಾಡಿ: ಚೊಕ್ಕಾಡಿ ಶ್ರೀ ರಾಮ ದೇವಸ್ಥಾನದ ದೇಸೀ ಭವನದಲ್ಲಿ ನಡೆಯಲಿರುವ ಸುಳ್ಯ ತಾಲೂಕು ಭಜನೋತ್ಸವದ ಮತ್ತು ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದಲ್ಲಿ ಭಾಗವಹಿಸುವ ಕುರಿತು ಪೂರ್ವಭಾವಿ ಸಭೆಯು ಚೊಕ್ಕಾಡಿ ಶ್ರೀ ರಾಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ನವೆಂಬರ್ 26ರಂದು ತಾಲೂಕು ಭಜನೋತ್ಸವ ಕಾರ್ಯಕ್ರಮ ವನ್ನು ನಡೆಸುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು.ಹಿರಿಯರಾದ
ಆನೆಕಾರ ಗಣಪಯ್ಯ ಜ್ಯೋತಿ ಬೆಳಗಿಸಿ ಸಭೆಗೆ ಚಾಲನೆ ನೀಡಿದರು.ತಾಲೂಕು ಭಜನಾ ಸಮಿತಿ ಅಧ್ಯಕ್ಷ ಯತೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರರಾದ ಬಾಲಕೃಷ್ಣ ಬೊಳ್ಳೂರು, ಜಗನ್ಮೋಹನ ರೈ ರೆಂಜಾಳ, ರಾಜಾರಾಮ್ ಭಟ್ ಬೆಟ್ಟ ,ವಲಯ ಸಂಚಾಲಕ ದಯಾನಂದ ಕೊರತೋಡಿ, ಪಂಚಾಯತ್ ಉಪಾಧ್ಯಕ್ಷೆ ಭುವನೇಶ್ವರಿ ಪದವು, ಒಕ್ಕೂಟ ಅಧ್ಯಕ್ಷೆ ವೀಣಾ ವೇದಿಕೆಯಲ್ಲಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಮಾಹಿತಿ ನೀಡಿದರು.ತಾಲೂಕು ಭಜನೋತ್ಸವ ಸಮಿತಿ ಅಧ್ಯಕ್ಷರಾಗಿ ನಾರಾಯಣ ಕೋಡ್ತುಗುಳಿ ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಮೇಲ್ವಿಚಾರಕ ಕೃಷ್ಣಪ್ಪ, ಉಪಾಧ್ಯಕ್ಷರಾಗಿ ವೆಂಕಟರಮಣ ಇಟ್ಟಿಗುಂಡಿ, ಜೊತೆ ಕಾರ್ಯದರ್ಶಿಯಾಗಿ ನಾರಾಯಣ ಕಳಂಜ, ಖಜಾಂಜಿಯಾಗಿ ಮಹೇಶ್ ಮೇರ್ಕಜೆ ಮತ್ತು ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು. ದೇವಾಲಯ ಸಮಿತಿ ಸದಸ್ಯ ಕೃಷ್ಣಮೂರ್ತಿ ನೇಣಾರು ಉಪಸ್ಥಿತರಿದ್ದರು.ಸೇವಾ ಪ್ರತಿನಿಧಿ ಸವಿತಾ ಪ್ರಾರ್ಥಿಸಿದರು.
ಮೇಲ್ವಿಚಾರಕ ಕೃಷ್ಣಪ್ಪ ಸ್ವಾಗತಿಸಿ, ಸೇವಾ ಪ್ರತಿನಿಧಿ ಹರ್ಷಿತಾ ವಂದಿಸಿದರು.