ಅಯ್ಯನಕಟ್ಟೆ: ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವದ ಪ್ರಯುಕ್ತ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ
ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ಮುಖ್ಯ ಭಾಷಣ ಮಾಡಿದರು.ಮುಖ್ಯ ಅಭ್ಯಾಗತರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಟ್ಲ ಸತೀಶ್ ಶೆಟ್ಟಿ,ಹಿರಿಯರಾದ ಬಾಲಕೃಷ್ಣ ಗೌಡ ಟಿ ಮುಂಡುಗಾರು ಮತ್ತು ಬಾಲಕೃಷ್ಣ ಗೌಡ ತೋಟದಮೂಲೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಮಿತಿಯ ಗೌರವ ಸಲಹೆಗಾರರಾದ ರಾಮಪ್ರಸಾದ್ ಕಾಂಚೋಡು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಸೇವಾ ಸಮಿತಿಯ ವಿಶ್ವಸ್ಥರು ಹಾಗೂ ಗೌರವಾಧ್ಯಕ್ಷರಾದ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ವಿಶ್ವಸ್ಥರಾದ ವಿಶ್ವನಾಥ ರೈ ಕಳಂಜಗುತ್ತು ವೆಂಕಟ್ರಮಣಗೌಡ ತಂಟೆಪಾಡಿ, ಶೀನಪ್ಪ ಗೌಡ ತೋಟದಮೂಲೆ ಉಪಾಧ್ಯಕ್ಷರಾದ ಅನಂತ ಕೃಷ್ಣ ತಂಟೆಪಾಡಿ, ಕಾರ್ಯದರ್ಶಿ ಪ್ರಶಾಂತ್ ಕಿಲಂಗೋಡಿ, ಕೋಶಾಧಿಕಾರಿ ಪ್ರಭಾಕರ ಆಳ್ವ ಭಜನಿ, ಸದಸ್ಯರಾದ ರಾಮ್ ಪ್ರಸಾದ್ ಕಾಂಚೋಡು, ಕೂಸಪ್ಪ ಗೌಡ ಮುಗುಪ್ಪು, ಜಗನ್ನಾಥ ರೈ ಉರುಂಬಿ, ಕೃಷ್ಣಪ್ಪ ಪೂಜಾರಿ ಮೂಲೆಮಜಲು ಗಂಗಾಧರ ತೋಟದಮೂಲೆ, ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷರಾದ ಸಪ್ತಗಿರಿ ಪುರಂದರ ಗೌಡ ಅಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ, ಕಾರ್ಯಾಧ್ಯಕ್ಷ ಚಂದ್ರಶೇಖರ ರೈ ಬಜನಿ, ಕಾರ್ಯದರ್ಶಿ ಕುಶಾಲಪ್ಪ ಗೌಡ ಮಣಿಮಜಲು ಉಪಾಧ್ಯಕ್ಷ ಪುರುಷೋತ್ತಮ ತಂಟೆಪಾಡಿ, ಕೋಶಾಧಿಕಾರಿ ಸತೀಶ್ ಕಳಂಜ ಜೊತೆ ಕಾರ್ಯದರ್ಶಿ ಕೌಶಿಕ್ ಕಡೆಪಾಲ, ಮಾರ್ಗದರ್ಶಕ ಮಂಡಳಿಯ ಹೆಗ್ಗಡೆ ಪರಮೇಶ್ವರಯ್ಯ ಕಾಂಚೊಡು, ಹರ್ಷ ಜೋಗಿಬೆಟ್ಟು ಲೋಕೇಶ್ ಮಣಿಮಜಲು ಗರಡಿ, ಗಣೇಶ್ ಮುದ್ದಾಜೆ, ಮುಂಡುಗಾರು ಸುಬ್ರಹ್ಮಣ್ಯ ವೆಂಕಪ್ಪ ನಾಯ್ಕ ಪೊಸೋಡು, ಸುಧಾಕರ ರೈ ಎ.ಎಂ.ಬಾಳಿಲ ರಾಮಚಂದ್ರ ರಾವ್ ಗೋಕುಲ, ರುಕ್ಮಯ ಗೌಡ ಕಳಂಜ, ಅಚ್ಯುತ ಗೌಡ ಬಾಳಿಲ, ಚಿದಾನಂದ ಗೌಡ ಪಂಜತ್ತಿ ಮಾರು ಮತ್ತಿತರರು ಉಪಸ್ಥಿತರಿದ್ದರು.ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಗಾನ ಬಯಲಾಟ ಮಾನಿಷಾದ ನಡೆಯಿತು.