ಅಯ್ಯನಕಟ್ಟೆ:ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೆಯಲ್ಲಿ ಬುಧವಾರ ಹಗಲು ನಡೆದ ಕೊಡಮಣಿತ್ತಾಯ, ಧೂಮಾವತಿ, ಶಿರಾಡಿ ದೈವಗಳ ಸಮಾಗಮ ಭಕ್ತಿ ಸಂಭ್ರಮದ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು. ಸಾವಿರಾರು ಮಂದಿ ಭಕ್ತರು ದೈವಗಳ ಸಂಗಮಕ್ಕೆ ಸಾಕ್ಷಿಯಾದರು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವದ ಕೊನೆಯ ದಿನವಾದ
ಜ. 29ರಂದು ಬೆಳಿಗ್ಗೆ ತಂಟೆಪಾಡಿಯಿಂದ ಶಿರಾಡಿ ದೈವದ ಭಂಡಾರ, ಕಳಂಜ ಗುತ್ತಿನಿಂದ ಧೂಮಾವತಿ ದೈವದ ಬಂಡಾರ ಮತ್ತು
ಬಾಳಿಲ ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ
ಭಂಡಾರ ಆಗಮಿಸಿತು. ಬಳಿಕ ಕಲ್ಲಮಾಡದಲ್ಲಿ ಕೊಡಮಣಿತ್ತಾಯ, ಧೂಮಾವತಿ, ಶಿರಾಡಿ ದೈವಗಳ ನರ್ತನ ಸೇವೆ, ಬೂಳ್ಯ ವಿತರಣೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಸೇವಾ ಸಮಿತಿಯ
ವಿಶ್ವಸ್ಥರು ಹಾಗೂ ಗೌರವಾಧ್ಯಕ್ಷರಾದ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ಅಧ್ಯಕ್ಷ ಚನ್ನಪ್ಪ ಗೌಡ ಕಜೆಮೂಲೆ ವಿಶ್ವಸ್ಥರಾದ ವಿಶ್ವನಾಥ ರೈ ಕಳಂಜಗುತ್ತು ವೆಂಕಟ್ರಮಣಗೌಡ ತಂಟೆಪಾಡಿ, ಶೀನಪ್ಪ ಗೌಡ ತೋಟದಮೂಲೆ ಉಪಾಧ್ಯಕ್ಷರಾದ ಅನಂತ ಕೃಷ್ಣ ತಂಟೆಪಾಡಿ, ಕಾರ್ಯದರ್ಶಿ ಪ್ರಶಾಂತ್ ಕಿಲಂಗೋಡಿ, ಕೋಶಾಧಿಕಾರಿ ಪ್ರಭಾಕರ ಆಳ್ವ ಭಜನಿ, ಸದಸ್ಯರಾದ ರಾಮ್ ಪ್ರಸಾದ್ ಕಾಂಚೋಡು, ಕೂಸಪ್ಪ ಗೌಡ ಮುಗುಪ್ಪು, ಜಗನ್ನಾಥ ರೈ ಉರುಂಬಿ, ಕೃಷ್ಣಪ್ಪ ಪೂಜಾರಿ ಮೂಲೆಮಜಲು ಗಂಗಾಧರ ತೋಟದಮೂಲೆ, ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿಯ

ಗೌರವಾಧ್ಯಕ್ಷರಾದ ಸಪ್ತಗಿರಿ ಪುರಂದರ ಗೌಡ, ಅಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ, ಕಾರ್ಯಾಧ್ಯಕ್ಷ ಚಂದ್ರಶೇಖರ ರೈ ಬಜನಿ, ಕಾರ್ಯದರ್ಶಿ ಕುಶಾಲಪ್ಪ ಗೌಡ ಮಣಿಮಜಲು ಉಪಾಧ್ಯಕ್ಷ ಪುರುಷೋತ್ತಮ ತಂಟೆಪಾಡಿ, ಕೋಶಾಧಿಕಾರಿ ಸತೀಶ್ ಕಳಂಜ ಜೊತೆ ಕಾರ್ಯದರ್ಶಿ ಕೌಶಿಕ್ ಕಡೆಪಾಲ, ಮಾರ್ಗದರ್ಶಕ ಮಂಡಳಿಯ ಹೆಗ್ಗಡೆ ಪರಮೇಶ್ವರಯ್ಯ ಕಾಂಚೊಡು, ಹರ್ಷ ಜೋಗಿಬೆಟ್ಟು ಲೋಕೇಶ್ ಮಣಿಮಜಲು ಗರಡಿ, ಗಣೇಶ್ ಮುದ್ದಾಜೆ, ಮುಂಡುಗಾರು ಸುಬ್ರಹ್ಮಣ್ಯ ವೆಂಕಪ್ಪ ನಾಯ್ಕ ಪೊಸೋಡು, ಸುಧಾಕರ ರೈ ಎ.ಎಂ.ಬಾಳಿಲ ರಾಮಚಂದ್ರ ರಾವ್ ಗೋಕುಲ, ರುಕ್ಮಯ ಗೌಡ ಕಳಂಜ, ಅಚ್ಯುತ ಗೌಡ ಬಾಳಿಲ, ಚಿದಾನಂದ ಗೌಡ ಪಂಜತ್ತಿ ಮಾರು ಮತ್ತಿತರರು ಉಪಸ್ಥಿತರಿದ್ದರು.